ದಿನನಿತ್ಯ ವ್ಯಾಪಾರಿಗಳಿಂದ ನೂರಾರು ರೂಪಾಯಿ ಸುಂಕ ವಸೂಲಿ ಮಾಡುತ್ತಾರೆ. ಆದರೆ ಯಾವುದೇ ಸೌಲಭ್ಯ ಒದಗಿಸಿಲ್ಲ. ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುತ್ತೇನೆ. ಅದಕ್ಕೂ ಸುಂಕ ವಸೂಲಿ ಮಾಡುತ್ತಾರೆ
ಬಖಾರ್ ಹೊಳವನಹಳ್ಳಿ
ಸಂತೆ ಮೈದಾನದಲ್ಲಿ ಕುಡಿಯುವ ನೀರಿಲ್ಲ ಶೌಚಾಲಯವಂತೂ ಕೇಳೋ ಹಾಗೆ ಇಲ್ಲ. ಬಯಲು ಶೌಚವೇ ಗತಿಯಾಗಿದೆ. ಸಂತೆಗೆ ಬರುವ ಹೆಣ್ಣು ಮಕ್ಕಳ ಪಾಡು ಹೇಳತೀರದು
ಗೋವಿಂದರಾಜು ವ್ಯಾಪಾರಿ
ಬೀದಿಬದಿ ವ್ಯಾಪಾರಿಗಳಿಗೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಫುಟ್‌ಪಾತ್‌ಗಳಲ್ಲಿ ದಿನನಿತ್ಯ ವ್ಯಾಪಾರ ಮಾಡಿಕೊಂಡು ಜೀವನ ನಿರ್ವಹಣೆ ಮಾಡುವಂತಾಗಿದೆ