ಕೊರಟಗೆರೆ: ತಾಲ್ಲೂಕಿನ ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಅಲಪನಹಳ್ಳಿಯಲ್ಲಿ ಆಸ್ತಿ ವಿಚಾರವಾಗಿ ಮಗನೇ ತಂದೆಯನ್ನು ಮಚ್ಚಿನಿಂದ ಕೊಚ್ವಿ ಕೊಲೆ ಮಾಡಿದ್ದಾನೆ.
ವೆಂಕಟಪ್ಪ (80) ಕೊಲೆಯಾದ ವ್ಯಕ್ತಿ. ಮಗ ಸಿದ್ದಪ್ಪ (50) ಕೊಲೆ ಮಾಡಿದ ಆರೋಪಿ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ, ಮಗನ ನಡುವೆ ಗಲಾಟೆ ಉಂಟಾಗಿದೆ. ಈ ವೇಳೆ ವೆಂಕಟಪ್ಪನನ್ನು ಸಿದ್ದಪ್ಪ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ಮಧುಗಿರಿ ಡಿವೈಎಸ್ಪಿ ರಾಮಚಂದ್ರ, ಪಿಎಸ್ಐಗಳಾದ ರೇಣುಕಾ ಯಾದವ್, ಟಿ.ಕೆ.ಯೋಗೀಶ್ ಭೇಟಿ ನೀಡಿದ್ದರು. ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ