ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರೆಂಗಾವ್‌ ವಿಜಯೋತ್ಸವ ಆಚರಣೆ

Last Updated 2 ಜನವರಿ 2021, 3:56 IST
ಅಕ್ಷರ ಗಾತ್ರ

ತುಮಕೂರು: ದೇಶದ ಅಸ್ಪೃಷ್ಯರ ಪಾಲಿಗೆ ಜ. 1 ಅವಿಸ್ಮರಣೀಯ ದಿನ. ಮರಾಠ ಪೇಶ್ವೆಗಳ ದೊಡ್ಡ ಸೈನ್ಯವನ್ನು ಕೆಲವೇ ಮಂದಿ ಇದ್ದ ಭೀಮ ಸೇನೆ ಯೋಧರು 18 ಗಂಟೆಗಳ ಕಾಲ ಹೋರಾಡಿ ಗೆಲವು ತಂದುಕೊಟ್ಟ ಆತ್ಮವಿಶ್ವಾಸದ ದಿನ ಎಂದು ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ.ನಿಧಿಕುಮಾರ್ ಹೇಳಿದರು.

ನಗರದ ಟೌನ್‍ಹಾಲ್ ಮುಂಭಾಗ ಶುಕ್ರವಾರ ಅಂಬೇಡ್ಕರ್ ಪ್ರಚಾರ ಸಮಿತಿಯಿಂದ ಆಯೋಜಿಸಿದ್ದ ಭೀಮ್- ಕೋರೆಂಗಾಂ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೊದಲ ಸ್ವಾತಂತ್ರ ಸಂಗ್ರಾಮ ನಡೆಯುವ 30 ವರ್ಷಗಳ ಮೊದಲೇ 1818ರಲ್ಲಿ ಮರಾಠ ಪೇಶ್ವೆಗಳ ಅಸ್ಪೃಷ್ಯತೆ ವಿರುದ್ಧ ಸಿಡಿದೆದ್ದ ಭೀಮ ಸೇನೆಯು 30 ಸಾವಿರ ಪೇಶ್ವೆ ಸೈನ್ಯವನ್ನು ಬಗ್ಗು ಬಡಿಯಿತು. ಇದೇ ಕಾರಣಕ್ಕಾಗಿ ಅಂಬೇಡ್ಕರ್ ಎಲ್ಲೇ ಇದ್ದರೂ ಜ. 1ರಂದು ಕೋರೆಂಗಾವ್‌ಗೆ ಭೇಟಿನೀಡುತ್ತಿದ್ದರು. ಯುದ್ಧದ ವಿಜಯೋತ್ಸವದ ನೆನಪಿಗೆ ಬ್ರಿಟಿಷರು ನಿರ್ಮಿಸಿದ್ದ ವಿಜಯಸ್ತಂಭಕ್ಕೆ ನಮನ ಸಲ್ಲಿಸುತ್ತಿದ್ದರು ಎಂದು ನೆನಪಿಸಿಕೊಂಡರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎನ್.ರಾಮಯ್ಯ, ‘2018ರಲ್ಲಿ ಕೋರೆಂಗಾಂ ವಿಜಯೋತ್ಸವದ ವೇಳೆ ನಡೆದ ಗಲಭೆಯನ್ನೇ ನೆಪವಾಗಿಟ್ಟುಕೊಂಡು ಅಂದಿನ ಮಹಾರಾಷ್ಟ್ರ ಸರ್ಕಾರವು ಬುದ್ಧಿಜೀವಿಗಳು, ಹೋರಾಟಗಾರರನ್ನು ಬಂಧಿಸಿ, ವಿಚಾರಣೆ ನಡೆಸದೆ ಕಾಲಹರಣ ಮಾಡುತ್ತಿದೆ. ಇದರ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸಬೇಕಿದೆ’ ಎಂದರು.

ಮುಖಂಡರಾದ ಹೆಗ್ಗೆರೆ ಕೃಷ್ಣಪ್ಪ, ಎಚ್‌.ಡಿ.ರಾಜೇಶ್, ಕೆ.ಗೋವಿಂದ ರಾಜು, ಚಲವಾದಿ ಶೇಖರ್, ಜಿ.ಆರ್‌.ಗಿರೀಶ್, ಮಂಜು, ಶಿವರಾಜು, ರಾಜಣ್ಣ ಅಳಾಲಸಂದ್ರ, ಶಿವರಾಜು ಕುಚ್ಚಂಗಿ, ತ್ಯಾಗರಾಜು, ಶಿವರಾಜ ಹೇಡನಹಳ್ಳಿ, ಪುಟ್ಟರಾಜು, ಸಂಜೀವಯ್ಯ, ಸಿದ್ದಲಿಂಗಯ್ಯ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT