ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಪುರುಷರ ಸಾವೇ ಅಧಿಕ

Last Updated 12 ಮೇ 2021, 6:29 IST
ಅಕ್ಷರ ಗಾತ್ರ

ತುಮಕೂರು: ಕೋವಿಡ್‌–19ನಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದ್ದು, ಅದರಲ್ಲೂ ಮಧ್ಯ ವಯಸ್ಕರು ಹಾಗೂ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿರುವುದು ಆತಂಕ ತರಿಸಿದೆ.

ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 16 ಮಂದಿ ಸಾವು ಕಂಡಿದ್ದು, ಅದರಲ್ಲಿ 12 ಪುರುಷರು, 4 ಮಹಿಳೆಯರು ಸೇರಿದ್ದಾರೆ. ಪ್ರತಿ ದಿನವೂ ಸಾವನ್ನಪ್ಪುವವರ ಸಂಖ್ಯೆಯನ್ನು ಗಮನಿಸಿದರೆ ಶೇ 70ರಷ್ಟು ಪುರುಷರೇ ಆಗಿದ್ದಾರೆ. ಮಂಗಳವಾರ ತುಮಕೂರು ನಗರ ಹಾಗೂ ತಾಲ್ಲೂಕಿನಲ್ಲಿ 6, ಮಧುಗಿರಿ, ಪಾವಗಡ, ಗುಬ್ಬಿ ತಾಲ್ಲೂಕಿನಲ್ಲಿ ತಲಾ 3 ಹಾಗೂ ಕೊರಟಗೆರೆ ತಾಲ್ಲೂಕಿನಲ್ಲಿ ಒಬ್ಬರು
ಮೃತಪಟ್ಟಿದ್ದಾರೆ.

ಸಾವನ್ನಪ್ಪಿದವರ ವಿವರ: ತುಮಕೂರು ನಗರದ ಹನುಮಂತಪುರದ 69 ವರ್ಷದ ಪುರುಷ, ಕ್ಯಾತ್ಸಂದ್ರದ 43 ವರ್ಷದ ಮಹಿಳೆ, ಉಪ್ಪಾರಹಳ್ಳಿ 41 ವರ್ಷದ ಪುರುಷ, ಶ್ರೀರಾಮನಗರದ 55 ವರ್ಷದ ಪುರುಷ, ಲೇಬರ್ ಕಾಲೊನಿ 70 ವರ್ಷದ ಪುರುಷ, ತಾಲ್ಲೂಕಿನ ಕೊನ್ನೇನಹಳ್ಳಿ 45 ವರ್ಷದ ಪುರುಷ ಮೃತಪಟ್ಟವರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಡಿ.ಸುರೇಶ್ (52) ಕೋವಿಡ್‌–19ನಿಂದ ಸೋಮವಾರ ಮೃತಪಟ್ಟಿದ್ದಾರೆ.
ಕಳೆದ ಹದಿನಾಲ್ಕು ದಿನಗಳಿಂದ ನಗರದ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

ಗುಬ್ಬಿ ಪಟ್ಟಣದ 70 ವರ್ಷದ ಪುರುಷ, ತಾಲ್ಲೂಕಿನ ಚಿಂದಿಗೆರೆ 46 ವರ್ಷದ ಪುರುಷ, ಕಲ್ಲಹಳ್ಳಿ 40 ವರ್ಷದ ಪುರುಷ; ಮಧುಗಿರಿ
ಪಟ್ಟಣದ 60 ವರ್ಷದ ಪುರುಷ, 50 ವರ್ಷದ ಮಹಿಳೆ, ತಾಲ್ಲೂಕಿನ ಕೋಡ್ಲಾಪುರದ 43 ವರ್ಷದ ಪುರುಷ; ಪಾವಗಡ ತಾಲ್ಲೂಕು ಪಳವಳ್ಳಿ 40 ವರ್ಷದ ಪುರುಷ, ನಾಗಲಪುರದ 40 ವರ್ಷದ ಮಹಿಳೆ,
ತಿಮ್ಮನಹಳ್ಳಿ 58 ವರ್ಷದ ಮಹಿಳೆ; ಕೊರಟಗೆರೆ ತಾಲ್ಲೂಕು ನಾಗಸಂದ್ರದ 67 ವರ್ಷದ ಪುರುಷ
ಸಾವನ್ನಪ್ಪಿದವರು.

ತಾಲ್ಲೂಕುವಾರು ವಿವರ: ತುಮಕೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು 430, ಚಿಕ್ಕನಾಯಕನಹಳ್ಳಿ 74, ಗುಬ್ಬಿ 49, ಕೊರಟಗೆರೆ 30, ಕುಣಿಗಲ್ 169, ಮಧುಗಿರಿ 127, ಪಾವಗಡ 148, ಶಿರಾ 282, ತಿಪಟೂರು 92, ತುರುವೇಕೆರೆ ತಾಲ್ಲೂಕಿನಲ್ಲಿ 56 ಮಂದಿಗೆ ಸೋಂಕು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT