ವೈ.ಎನ್.ಹೊಸಕೋಟೆ: ಕ್ಷೀರಭಾಗ್ಯ ಯೋಜನೆಯಡಿ ಸರ್ಕಾರ ಮಕ್ಕಳು ಮತ್ತು ಬಾಣಂತಿಯರಿಗಾಗಿ ಅಂಗನವಾಡಿ ಕೇಂದ್ರಗಳಿಗೆ ಉಚಿತವಾಗಿ ಪೂರೈಕೆ ಮಾಡಲಾಗುತ್ತಿರುವ ಹಾಲಿನ ಪುಡಿ ಪಾಕೆಟ್ಗಳು ಖಾಸಗಿ ಅಂಗಡಿಗಳಲ್ಲಿ ಮಾರಾಟವಾಗುತ್ತಿರುವುದು ಕಂಡು ಬಂದಿದೆ.

ಗ್ರಾಮದ ಎಸ್.ಕೆ.ಪಿ.ಟಿ ರಸ್ತೆ ಮತ್ತು ಎಂ.ಜಿ.ರಸ್ತೆ ಅಂಗಡಿಗಳಲ್ಲಿ ಹಲವು ದಿನಗಳಿಂದ ಈ ಪಾಕೆಟ್ಗಳು ಮಾರಾಟವಾಗುತ್ತಿವೆ. ಸಿಡಿಪಿಒ ಸುನೀತಾ ಶನಿವಾರ ಕಾರ್ಯಾಚರಣೆ ನಡೆಸಿದಾಗ ಅಂಗಡಿಗಳಲ್ಲಿ ಮಾರ್ಚ್ ತಿಂಗಳ ಸರಬರಾಜು ದಿನಾಂಕವುಳ್ಳ ಹಾಲಿನ ಪುಡಿ ಪಾಕೆಟ್ಗಳು ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಅಂಗಡಿ ಮಾಲೀಕರನ್ನು ವಿಚಾರಿಸಿದಾಗ; ಕೆಲ ಅಂಗನವಾಡಿ ಕೇಂದ್ರಗಳ ಶಿಕ್ಷಕಿಯರು ಮತ್ತು ಸಹಾಯಕಿಯರು ₹60ನಂತೆ ಒಂದು ಪಾಕೆಟ್ನಂತೆ ಮಾರಾಟ ಮಾಡಿರುವುದು ತಿಳಿದು ಬಂದಿದೆ.

ಅಕ್ರಮ ಕಂಡು ಬಂದರೆ ಇಲಾಖೆ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಡಿಪಿಒ ಸುನೀತಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.