ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದನೆ: ತಹಶೀಲ್ದಾರ್

ಶನಿವಾರ, ಮೇ 25, 2019
22 °C

ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದನೆ: ತಹಶೀಲ್ದಾರ್

Published:
Updated:
Prajavani

ಕುಣಿಗಲ್: ತಾಲ್ಲೂಕಿನ 6 ಗ್ರಾಮ ಪಂಚಾಯಿತಿಯ 19 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ತಾಲ್ಲೂಕು ಆಡಳಿತ ಸ್ಪಂದಿಸಿದೆ ಎಂದು ತಹಶೀಲ್ದಾರ್ ವಿಶ್ವನಾಥ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್, ಕುಡಿಯುವ ನೀರಿನ ಸಮಸ್ಯೆಗಳಿರುವ ಗ್ರಾಮಗಳಲ್ಲಿ 13 ಟ್ಯಾಂಕರ್‌ಗಳಲ್ಲಿ ನಿತ್ಯ 45 ಟ್ರಿಪ್ ನೀರು ಸರಬರಾಜು ಮಾಡಲಾಗುತ್ತಿದೆ. 6 ಖಾಸಗಿ ಕೊಳವೆಬಾವಿ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು ನೀರನ್ನು ಪಡೆದು ವಿತರಿಸಲಾಗುತ್ತಿದೆ. ಜನಗಳಿಗಷ್ಟೇ ಅಲ್ಲ ಜಾನುವಾರುಗಳಿಗೂ ನೀರಿನ ವ್ಯವಸ್ಥೆಗೆ ಸೂಚನೆ ನೀಡಲಾಗಿದ್ದು, ತಾಲ್ಲೂಕಿನ ಜನ ಮತ್ತು ಜಾನುವಾರುಗಳಿಗೆ ನೀರಿನ ಕೊರತೆ ಉಂಟಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಜಾನುವಾರು ತೊಟ್ಟಿಗಳನ್ನು ಶುದ್ಧದಗೊಳಿಸಿ ನೀರಿನಿಂದ ತುಂಬಿಸಲು ಸೂಚನೆ ನೀಡಲಾಗಿದೆ. ತಾಲ್ಲೂಕಿನ ಜಾನುವಾರುಗಳಿಗೆ 25 ವಾರಗಳಿಗಾಗುವಷ್ಟು ಮೇವಿದ್ದು, ಮೇವಿನ ಬ್ಯಾಂಕ್ ಸ್ಥಾಪನೆ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದದರು.

ರೈತರ ಪಹಣಿಗಳ ತಿದ್ದುಪಡಿ ಮಾಡುವುದು ಕಂದಾಯ ಇಲಾಖೆ ಕರ್ತವ್ಯವಾಗಿದ್ದು, ತಾಲ್ಲೂಕಿನ ರೈತರು ಮಧ್ಯವರ್ತಿಗಳ ಬಳಿ ಹೋಗದೆ, ಯಾವುದೇ ರೀತಿಯ ಹಣ ನೀಡದೆ ನೇರವಾಗಿ ಸಂಪರ್ಕಿಸಿ ಸದುಪಯೋಗ ಪಡೆದುಕೊಳ್ಳಲು ಮನವಿ ಮಾಡಿದರು.

ಬರಗಾಲ ಕಾರ್ಯಪಡೆಯಿಂದ ತಾಲ್ಲೂಕಿನಲ್ಲಿ 51 ಕೊಳವೆಬಾವಿ ಕೊರೆಯಲಾಗಿದ್ದು, 47 ಸಫಲವಾಗಿದೆ, ₹ 25 ಲಕ್ಷ ವೆಚ್ಚದಲ್ಲಿ ನೀರಿನ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !