ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆದ ಹೂ ನಾಶಗೊಳಿಸಿದ ರೈತ

ಮಾರಾಟಕ್ಕೆ ವ್ಯವಸ್ಥೆಗಳಿಲ್ಲದೆ ಹತಾಶನಾದ ರೈತ
Last Updated 10 ಏಪ್ರಿಲ್ 2020, 13:11 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನ ಹಂಚಿಪುರದಲ್ಲಿ 5 ಎಕರೆ ಜಮೀನಿನಲ್ಲಿ ಬೆಳೆದ ಹೂವಿನ ಮಾರಾಟಕ್ಕೆ ವ್ಯವಸ್ಥೆಗಳಿಲ್ಲದ ಕಾರಣ ಬೇಸತ್ತ ರೈತ ಟ್ರಾಕ್ಟರ್ ಹರಿಸಿ ₹4 ಲಕ್ಷ ಮೌಲ್ಯದ ಹೂವನ್ನು ನಾಶಗೊಳಿಸಿದ್ದಾರೆ.

ತಾಲ್ಲೂಕಿನ ಅಮೃತೂರು ಹೋಬಳಿಯ ಗೋವಿಂದರಾಜು ಐದು ಎಕರೆ ಜಮೀನನಲ್ಲಿ ಚೆಂಡು ಹೂ, ಗುಲಾಬಿ ಮತ್ತು ಸುಗಂಧರಾಜ ಹೂವನ್ನು ಬೆಳೆದಿದ್ದರು. ಇನ್ನೇನೂ ಕೆಲದಿನಗಳಲ್ಲಿ ಹೂವುಗಳನ್ನು ಕಿತ್ತು ಮಾರಾಟ ಮಾಡಬೇಕು ಎನ್ನುವ ಸಮಯದಲ್ಲಿ ಲಾಕ್‌ಡೌನ್ ಘೋಷಣೆಯಾಯಿತು. ಇದರಿಂದ ಹೂವನ್ನು ಮಾರಾಟ ಮಾಡಲಾಗದೆ ಬೇಸತ್ತು ಟ್ರಾಕ್ಟರ್ ಹಾಯಿಸಿ ನಾಶ ಪಡಿಸಿದ್ದಾರೆ.

ಮೊದಲು ಹೂವುಗಳನ್ನು ಕುಣಿಗಲ್ ಪಟ್ಟಣ ಮತ್ತು ನಾಗಮಮಗಲದ ಸಗಟು ವ್ಯಾಪಾರಿಗಳಿಗೆ ಮಾರುತ್ತಿದ್ದರು.

‘ಕೊರೊನಾ ಲಾಕ್‌ಡೌನ್‌ನಿಂದಾಗಿ ಸಗಟು ವ್ಯಾಪಾರಿಗಳು ಹೂವನ್ನು ಖರೀದಿಸಲು ನಿರಾಕರಿಸಿದರು. ಜಮೀನನಲ್ಲಿ ಒಣಗುತ್ತಿದ್ದ ಹೂವನ್ನು ನೋಡಲಾಗದೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದೆ. ಆದರೂ ಪ್ರಯೋಜನವಾಗದ ಕಾರಣ ಬೆಳೆ ನಾಶಪಡಿಸಿದೆ’ ಎಂದು ಗೋವಿಂದರಾಜು ತಿಳಿಸಿದರು.

‘ಹೂವಿನ ಜತೆಗೆ ಉಳಿದ 2 ಎಕರೆ ಜಮೀನಿನಲ್ಲಿ ಪಪ್ಪಾಯ ಬೆಳೆದಿದ್ದು, ಅದಕ್ಕೂ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ಗಿಡದಲ್ಲೇ ಹಣ್ಣಾಗಿ ಕೊಳೆಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಹಾರದ ಭರವಸೆ ನೀಡುತ್ತಿದ್ದಾರೆಯೇ ಹೊರತು ಮಾರಾಟದ ದಾರಿ ತೋರುತ್ತಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT