ಬುಧವಾರ, ಸೆಪ್ಟೆಂಬರ್ 30, 2020
21 °C

ಕುಣಿಗಲ್: ಬಾಡಿಗೆ ಬಾಕಿ, ಅಂಗನವಾಡಿಗೆ ಬೀಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ಪಟ್ಟಣದ ಸಿದ್ಧಾರ್ಥ ಕಾಲೊನಿಯ ಅಂಗನವಾಡಿ ಕೇಂದ್ರದ ಬಾಡಿಗೆ ಕಟ್ಟಡಕ್ಕೆ ಎರಡು ವರ್ಷದಿಂದ ಬಾಡಿಗೆ ಪಾವತಿಸದ ಕಾರಣ ಮಾಲೀಕರು ಬುಧವಾರ ಬೀಗ ಹಾಕಿದ್ದಾರೆ. ಅಂಗನವಾಡಿ ಕಾರ್ಯಕರ್ತೆ ಯೋಗೇಶ್ವರಿ ಅಸಹಾಯಕರಾಗಿದ್ದು, ಕಾರ್ಯನಿರ್ವಹಿಸದಂತಾಗಿದೆ.

ಪಟ್ಟಣದಲ್ಲಿನ 26 ಅಂಗನವಾಡಿ ಕೇಂದ್ರಗಳಲ್ಲಿ 23 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಒಂದು ವರ್ಷದಿಂದ ಬಾಡಿಗೆ ಹಣ ಪಾವತಿಯಾಗಿಲ್ಲ. ಅಂಗನವಾಡಿಗಾಗಿ ಸೂಕ್ತ ಕಟ್ಟಡಗಳನ್ನು ಬಾಡಿಗೆಗೆ ಪಡೆದಿರುವ ಕಾರ್ಯಕರ್ತೆಯರು ಮುಂಗಡ ಹಣವನ್ನು ಸ್ವಂತವಾಗಿ ಭರಿಸಿದ್ದಾರೆ. ಬಾಡಿಗೆಯನ್ನು ಶೀಘ್ರ ಸರ್ಕಾರ ನೀಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಶಾಂತಕುಮಾರಿ ಹೇಳಿದರು

ಕೊರೊನಾದಿಂದಾಗಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿಲ್ಲ. ಆದರೆ ಮಕ್ಕಳು, ಬಾಣಂತಿಯರು ಮತ್ತು ಗರ್ಭಿಣಿಯರಿಗೆ ನೀಡಬೇಕಾದ ಆಹಾರಗಳನ್ನು ಸಂಗ್ರಹಿಸಿ ವಿತರಣೆ ಮಾಡಬೇಕಿದೆ. ತಾಯಂದಿರ ಸಭೆ, ಬಾಲವಿಕಾಸ ಸಮಿತಿ ಸಭೆಗಳು ನಡೆಯಬೇಕಿದೆ. ಒಬ್ಬ ಮಾಲೀಕರು ಬಾಡಿಗೆಗಾಗಿ ಬೀಗ ಹಾಕಿದ್ದಾರೆ. ಎಲ್ಲರೂ ಈ ಪ್ರವೃತ್ತಿ ಮುಂದುವರೆಸುವ ಮೊದಲು ಇಲಾಖೆ ಬಾಡಿಗೆ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

‘ಬಾಡಿಗೆ ದರನಿಗದಿ ಬಗ್ಗೆ ಗೊಂದಲಗಳಿವೆ. ಪರಿಷ್ಕೃತ ಪಟ್ಟಿಯನ್ನು ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆದು ಪಾವತಿಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನುಷಾ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.