ಶುಕ್ರವಾರ, ಸೆಪ್ಟೆಂಬರ್ 24, 2021
24 °C

ಬೆಳೆ ಸಮೀಕ್ಷೆಗೆ ಸಜ್ಜಾದ ಕುಣಿಗಲ್ ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಪೋಷಕರ ಬೆಳೆ ಸಮೀಕ್ಷೆಯನ್ನು ಮೊಬೈಲ್ ಮೂಲಕ ನಡೆಸುವ
ಹೊಸ ಪ್ರಯತ್ನಕ್ಕೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸೌಮಶ್ರೀ ಬುಧವಾರ ಚಾಲನೆ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಬೆಳೆ ಸಮೀಕ್ಷೆಯ ಆ್ಯಪ್ ಬಳಕೆ ವಿಧಾನವನ್ನು ತಿಳಿಸಿದರು.

ವಿದ್ಯಾರ್ಥಿಗಳ ಮೊಬೈಲ್‌ನಲ್ಲಿ ಬೆಳೆ ಸಮೀಕ್ಷೆಯ ಆ್ಯಪ್ ಡೌನ್‌ಲೋಡ್‌ನ ವಿವಿಧ ಹಂತಗಳನ್ನು ವಿವರಿಸಿ, ನಂತರ ತಮ್ಮ ಪೋಷಕರ ಜಮೀನಿನ ಬೆಳೆ ಸಮೀಕ್ಷೆ ಮಾಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸೌಮ್ಯಶ್ರೀ, ವಿದ್ಯಾರ್ಥಿಗಳು ಮೊಬೈಲ್ ಬಳಸುವುದನ್ನು ಕಲಿತಿದ್ದಾರೆ. ಸಂದೇಶಗಳನ್ನು, ಪಠ್ಯ ಕ್ರಮಗಳನ್ನು ಟ್ಯಾಬ್ ಬಳಕೆಯಲ್ಲಿ ಮಾಡುತ್ತಿದ್ದಾರೆ. ಇಲಾಖೆಯ ಆಶಯದಂತೆ ರೈತರು ತಮ್ಮ ಬೆಳೆಗಳ ಸಮೀಕ್ಷೆಯನ್ನು ತಾವೇ ಮಾಡಬೇಕಾಗಿದ್ದು, ಬಹುತೇಕ ರೈತರಿಗೆ ಸಮಸ್ಯೆಯಾಗಿದೆ. ಕೃಷಿ ಇಲಾಖೆಯ ಪ್ರತಿ ಸೌಲಭ್ಯಕ್ಕೂ ಬೆಳೆ ಸಮೀಕ್ಷೆ ವರದಿ ಅಗತ್ಯವಾಗಿದೆ. ಇಂತಹ ಸಮಯದಲ್ಲಿ ಮೊಬೈಲ್‌ ಬಳಕೆ ಮಾಡುತ್ತಿರುವ ವಿದ್ಯಾರ್ಥಿಗಳು ಬೆಳೆ ಸಮೀಕ್ಷೆ ಮಾಡುವುದರ ಮೂಲಕ ತಮ್ಮ ತಂದೆ ತಾಯಿಯರ ಜಮೀನು ಎಷ್ಟಿದೆ, ಎಲ್ಲಿದೆ ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿಯಾದರೂ ಈ ನೆಪದಲ್ಲಿ ಪಡೆದುಕೊಳ್ಳ
ಬಹುದು. ಇದರಿಂದ ಪೋಷಕರಿಗೂ ಸಹಾಯವಾಗಲಿದೆ ಎಂದರು.

ತಾಂತ್ರಿಕ ಅಧಿಕಾರಿ ನೂರು ಅಜಂ, ಕ್ಷೇತ್ರ ತಾಂತ್ರಿಕ ಸಹಾಯಕ ದೇವರಾಜು, ಕಾಲೇಜಿನ ಸಹ ಪ್ರಾಧ್ಯಾಪಕ ವಿಶ್ವೇಶ್ವರಯ್ಯ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು