ಕುಣಿಗಲ್: ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಲ್.ಬೋರೇಗೌಡ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿಧ ಶಿಕ್ಷಕ ಸಂಘಟನೆ ಹಾಗೂ ಸಂಘ ಸಂಸ್ಥೆಗಳು ಪಟ್ಟಣದ ಪ್ರವಾಸಿ ಮಂದಿರದಿಂದ ಬೆಳ್ಳಿರಥದಲ್ಲಿ ಕೂರಿಸಿ ಮೆರವಣಿಗೆ ನಡೆಸಿ ಗೌರವ ಸಮರ್ಪಣೆ ಮಾಡಿದರು.

ವಿದ್ಯಾರ್ಥಿನಿಯರು, ಶಿಕ್ಷಕಿಯರು ಕುಂಭಮೇಳದೊಂದಿಗೆ ಪಟಕುಣಿತ, ಡೊಳ್ಳು ಕುಣಿತ ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಿದರು.

ಪಟ್ಟಣದ ಜಿಕೆಬಿಎಂಎಸ್ ಶಾಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ, ‘ಹಲವಾರು ನಿವೃತ್ತ ಅಧಿಕಾರಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ಆದರೆ ಇಂತಹ ಪುರ ಮೆರವಣಿಗೆ ಮೂಲಕ ಸಾವಿರಾರು ಮಂದಿ ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರು ಅದ್ದೂರಿ ಕಾರ್ಯಕ್ರಮ ಮಾಡುತ್ತಿರುವುದನ್ನು ಗಮನಿಸಿದರೆ ಅವರ ಅಧಿಕಾರಾವಧಿಯಲ್ಲಿ ಜನ ಮೆಚ್ಚುವ ಕೆಲಸ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ’ ಎಂದರು.

ತಹಶೀಲ್ದಾರ್ ಕರಿಯ ನಾಯಕ್, ಜಿ.ಪಂ. ಮಾಜಿ ಅಧ್ಯಕ್ಷ ವೈ.ಎಚ್. ಹುಚ್ಚಯ್ಯ, ಕಸಾಪ ಅಧ್ಯಕ್ಷ ಡಾ.ಕಪನಿಪಾಳ್ಯ, ರಂಗಧಾಮಪ್ಪ, ಮಂಜುನಾಥ್, ಲಕ್ಷ್ಮಮ್ಮ, ಮಮತಾಮಣಿ, ತಾರಾದೇವಿ, ಗೋಪಾಲಕೃಷ್ಣ, ಶ್ರೀನಿವಾಸಮೂರ್ತಿ, ಹರೀಶ್ ಕುಮಾರ್, ರಮೇಶ್, ಬೋರೆಗೌಡ, ರಾಮಸ್ವಾಮಿಗೌಡ, ಎಸ್.ಎನ್. ನರಸಿಂಹಮೂರ್ತಿ, ಬೋರೇಗೌಡ, ಶಿವರಾಮು, ಗೋವಿಂದರಾಜು, ಸ್ವಾಮಿಗೌಡ ಹನುಮಂತಯ್ಯ, ಬಿ.ಬಿ.ನಾಗರಾಜು, ಗಂಗಾಧರ್, ಸೋಮಶೇಖರ್, ಡಿ.ಕೃಷ್ಣ, ಹುಲಿಯೂರುದುರ್ಗ ನಟರಾಜು, ವೇಣುಗೋಪಾಲ್, ಎಚ್.ಬಿ. ರವಿಕುಮಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.