ಕುಣಿಗಲ್ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ವಾಹನ ಸಂಚಾರ ದಟ್ಟಣೆ
ಅಂಗಡಿಗಳನ್ನು ತೆರವು ಮಾಡಿದ ಕಾರಣ ಜೀವನ ಕಷ್ಟವಾಗಿದೆ. ಅಂಗಡಿಗಳನ್ನು ತೆರವು ಮಾಡಿ ಎರಡು ತಿಂಗಳಾದರೂ ಪ್ರಾರಂಭ ಮಾಡದ ಕಾರಣ ಸಮಸ್ಯೆ ಹೆಚ್ಚಾಗಿದೆ.
–ರಾಮಕೃಷ್ಣ, ಮಡಕೆಹಳ್ಳಿ
ಬಸ್ ನಿಲ್ದಾಣದಲ್ಲಿ 30 ಖಾಸಗಿ ಬಸ್‌ಗಳು ಮಾಗಡಿ ಬೆಂಗಳೂರು ತುಮಕೂರು ಮೈಸೂರು ಕಡೆ ಸಂಚರಿಸುತ್ತಿದ್ದು ಶಕ್ತಿ ಯೋಜನೆಯಿಂದ ಖಾಸಗಿ ಬಸ್‌ಗಳಿಗೆ ಹೊಡೆತ ಬಿದ್ದಿವೆ.
–ವೆಂಕಟೇಶ, ಖಾಸಗಿ ಬಸ್ ಮಾಲೀಕ
ಕಳೆದ 20 ವರ್ಷಗಳ ಹಿಂದೆ ಬಸ್ ನಿಲ್ದಾಣ ನಿರ್ಮಿಸಲು ಇದೇ ರೀತಿಯಲ್ಲಿ ತೆರವು ಮಾಡಲಾಗಿತ್ತು. ಈಗ ಮತ್ತೆ ಅದೇ ಸ್ಥಿತಿ ನಿರ್ಮಾಣ ಮಾಡದೆ ಕಾಮಗಾರಿ ಪ್ರಾರಂಭಿಸಬೇಕು. ಪರ್ಯಾಯ ವ್ಯವಸ್ಥೆಗೆ ಶಾಸಕರು ಗಮನಹರಿಸಬೇಕು