ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಕ್ಷೇತ್ರ ನಾಟಕ ಪ್ರದರ್ಶನ

Published 1 ಅಕ್ಟೋಬರ್ 2023, 16:48 IST
Last Updated 1 ಅಕ್ಟೋಬರ್ 2023, 16:48 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನ ಅತ್ತಿಂಗೆರೆ ಊರಹಬ್ಬ ಮತ್ತು ಸಿದ್ದೇಶ್ವರಸ್ವಾಮಿ ಜಾತ್ರೆ ಅಂಗವಾಗಿ ಕುರುಕ್ಷೇತ್ರ ನಾಟಕ ಬುಧವಾರ ರಾತ್ರಿ ನಡೆಯಿತು.

ನಾಟಕಾಭಿನಯಕ್ಕೆ ಚಾಲನೆ ನೀಡಿದ ರಾಜ್ಯ ಬಿಜೆಪಿ ಒಬಿಸಿ ಘಟಕದ ಉಪಾಧ್ಯಕ್ಷ ಎ.ಎಚ್‌.ಬಸವರಾಜು,  ಬಾಲ್ಯದಲ್ಲಿ ಪೌರಾಣಿಕ ನಾಟಕಾಭಿನಯ ನೋಡಿದ್ದರಿಂದಲೇ ನೀತಿಯುತ ಜೀವನ ನಡೆಸಲು ಸಾಧ್ಯವಾಗಿದೆ ಎಂದರು.

ರಂಗನಿರ್ದೇಶಕ ಹೊಸಪೇಟೆ ವೆಂಕಟೇಶ್‌ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ಮಹಾಭಾರತ ಮತ್ತು ರಾಮಾಯಣದ ಕೃತಿಗಳನ್ನು ಓದಿಸುವುದರಿಂದ ಮಕ್ಕಳಲ್ಲಿ ನೈತಿಕತೆ ಬೆಳೆಯಲಿದೆ ಎಂದರು.

ಪುರಸಭೆ ಸದಸ್ಯೆ ಭಾಗ್ಯಮ್ಮ, ಅಲೆಮಾರಿ ಜಿಲ್ಲಾ ನಿರ್ದೇಶಕ ಮಾರಪ್ಪ ದೊಂಬಿದಾಸ, ರಂಗಕಲಾವಿದರಾದ ರವಿ, ನಾಗರಾಜು, ಮನುಕುಮಾರ್‌, ನಿಜಗುಣ, ಲೋಕೇಶ್‌, ನಾಗಮಣಿ, ನಿರ್ಮಲ, ಕನಕ, ಈಶ್ವರಪ್ಪ, ಶಿವರಾಜು, ರಾಜು, ಕುಮಾರ್‌, ರಂಗಕಲೆ ಬಗ್ಗೆ ಮಾತನಾಡಿದರು.

ಮಾಗಡಿ ಅತ್ತಿಂಗೆರೆಯಲ್ಲಿ ನಡೆದ ಕುರುಕ್ಷೇತ್ರ ಪೌರಾಣಿಕ ನಾಟಕಾಭಿನಯಕ್ಕೆ ಎ.ಎಚ್‌.ಬಸವರಾಜು ಚಾಲನೆ ನೀಡಿ ಕಲಾವಿದರನ್ನು ಸನ್ಮಾನಿಸಿದರು.
ಮಾಗಡಿ ಅತ್ತಿಂಗೆರೆಯಲ್ಲಿ ನಡೆದ ಕುರುಕ್ಷೇತ್ರ ಪೌರಾಣಿಕ ನಾಟಕಾಭಿನಯಕ್ಕೆ ಎ.ಎಚ್‌.ಬಸವರಾಜು ಚಾಲನೆ ನೀಡಿ ಕಲಾವಿದರನ್ನು ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT