ಮಧುಗಿರಿಯಲ್ಲಿ ವಾಯುವಿಹಾರಕ್ಕೆ ಸೂಕ್ತ ಪಾರ್ಕ್‌ಗಳು ಇಲ್ಲದೆ ವೃದ್ಧರು ಮಹಿಳೆಯರು ಹಾಗೂ ಮಕ್ಕಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈಗಿರುವ ಪಾರ್ಕ್‌ಗಳನ್ನು ಸುಂದರವಾಗಿ ಅಭಿವೃದ್ಧಿ ಪಡಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ.
ಪಿ.ಕುಮಾರ್, ನಿವೃತ್ತ ಬ್ಯಾಂಕ್ ನೌಕರ ಮಧುಗಿರಿ
ಪುರಸಭೆ ಮುಂಭಾಗ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿನ ಪಾರ್ಕ್‌ಗಳನ್ನು ಅಭಿವೃದ್ಧಿ ಮಾಡಿದರೆ ಬೆಳಿಗ್ಗೆ ಮತ್ತು ಸಂಜೆ ಸಮಯ ಕಳೆಯಲು ಮಕ್ಕಳು ಆಟವಾಡಲು ಸಹಕಾರಿಯಾಗುತ್ತದೆ
ಎಂ.ಬಿ.ಶಿವಶಂಕರ್, ನಿವೃತ್ತ ಶಿಕ್ಷಕ
18ನೇ ವಾರ್ಡ್‌ನಲ್ಲಿನ ಪಾರ್ಕ್‌ನಲ್ಲಿ ಆಳೆತ್ತರ ಗಿಡ ಬೆಳೆದಿರುವುದರಿಂದ ವಿಷ ಜಂತುಗಳ ಹಾವಳಿ ಹೆಚ್ಚಾಗಿದೆ. ಹಗಲಿನಲ್ಲೇ ಹಾವುಗಳು ರಸ್ತೆಗೆ ಬರುತ್ತಿವೆ. ಪಾರ್ಕ್‌ನಲ್ಲಿರುವ ಮಕ್ಕಳ ಆಟೋಪಕರಣ ವಾಕಿಂಗ್ ಪಾತ್‌ಗಳಲ್ಲಿ ಗಿಡ ಬೆಳೆದು ಸಂಪೂರ್ಣ ಹಾಳಾಗಿವೆ.
ಕೃಷ್ಣಮೂರ್ತಿ, ನಿವಾಸಿ
ಮಧುಗಿರಿಯ 18ನೇ ವಾರ್ಡ್‌ನ ನಿರ್ವಹಣೆ ಇಲ್ಲದ ಪಾರ್ಕ್‌ನಲ್ಲಿಯೇ ಮಕ್ಕಳ ಆಟ