ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋವಿನಕೆರೆ | ಮಳೆ ಕೊರತೆ; ರಾಗಿ ಪೈರಿಗೆ ಬಿಂದಿಗೆಯಲ್ಲಿ ನೀರು

Published 10 ಆಗಸ್ಟ್ 2023, 13:26 IST
Last Updated 10 ಆಗಸ್ಟ್ 2023, 13:26 IST
ಅಕ್ಷರ ಗಾತ್ರ

ತೋವಿನಕೆರೆ: ಮಳೆ ಇಲ್ಲದೆ ಒಣಗುತ್ತಿರುವ ರಾಗಿ ಪೈರನ್ನು ಉಳಿಸಿಕೊಳ್ಳಲು ಇಲ್ಲಿನ ಟಿ.ಎಲ್.ಸಿದ್ಧಗಂಗಣ್ಣ ಮತ್ತು ಮಹಾದೇವಮ್ಮ ದಂಪತಿ ಟ್ಯಾಂಕರ್‌ನಲ್ಲಿ ನೀರು ತರಿಸಿಕೊಂಡು ಬಿಂದಿಗೆಯಲ್ಲಿ ಹೊಲಕ್ಕೆ ಹಾಕುತ್ತಿದ್ದಾರೆ.

ಇವರು ಜಮೀನಿನಲ್ಲಿ ರಾಗಿ ಬಿತ್ತಿದ್ದು, ಚೆನ್ನಾಗಿ ಬಂದಿದೆ. ಆದರೆ ಹತ್ತು ದಿನದಿಂದ ಮಳೆ ಇಲ್ಲದೆ ಒಣಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆ ಬಂದರೆ ಜಮೀನಿಗೆ ನಾಟಿ ಮಾಡಬಹುದು ಎನ್ನುವ ಉದ್ದೇಶದಿಂದ ಬಿಂದಿಗೆಯಲ್ಲಿ ನೀರು ಹಾಕುತ್ತಿದ್ದಾರೆ.

ಜುಲೈ 10ರಂದು ಎರಡು ಎಕರೆ ನಾಟಿ ಮಾಡಲು ಎಂಟು ಕೆ.ಜಿ ರಾಗಿ ಒಟ್ಟು ಬಿಟ್ಟಿದ್ದೆ. ಸರಿಯಾಗಿ ಮಳೆ ಬಂದಿಲ್ಲ, ಭೂಮಿಯಲ್ಲಿ ತೇವಾಂಶ ಇಲ್ಲ. ಪೈರು ಒಣಗಲು ಪ್ರಾರಂಭವಾಗಿದೆ. ತಲಾ ₹700 ನೀಡಿ ಎರಡು ಟ್ಯಾಂಕರ್‌ ನೀರು ಬಿಡಿಸಿಕೊಂಡಿದ್ದೇನೆ. ಈಗ ಪೈರು ಉಳಿಸಿಕೊಂಡರೆ ಇನ್ನು ಹತ್ತು ದಿನದವರೆಗೂ ಹಾಕಬಹುದು ಎನ್ನುತ್ತಾರೆ ಮಹಾದೇವಮ್ಮ

ಮಳೆ ಕೊರತೆಯಾಗಿ ಹಲವು ಸಮಸ್ಯೆಗಳು ಕೃಷಿಕರಿಗೆ ಉಂಟಾಗಿದೆ. ಜಮೀನಿನಲ್ಲಿ ರಾಗಿ ಚೆಲ್ಲಿ ಬೆಳದಿದ್ದನು ಕಿತ್ತು ಬೇರೆ ಹಾಕಿದ್ದವರಿಗೆ ಮಳೆ ಬೇಕಾಗಿತು. ಮಳೆ ಬಂದಿಲ್ಲ. ಅಂತಹ ಪೈರು ಬಿಸಿಲಿನ ತಾಪಕ್ಕೆ ಸುಟ್ಟು ಹೋಗುತ್ತವೆ ಎನ್ನುತ್ತಾರೆ ರೈತ ಅಂಜನ್ ಕುಮಾರ್ ಜುಂಜರಾಮನಹಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT