ತಡೆಗೋಡೆ ಕಾಮಗಾರಿಗೆ ಭೂಮಿಪೂಜೆ

ಪಾವಗಡ: ಪಟ್ಟಣದ ಅಗಸರ ಕುಂಟೆಗೆ ತಡೆಗೋಟೆ ನಿರ್ಮಿಸುವ ಕಾಮಗಾರಿಗೆ ಸೋಮವಾರ ಶಾಸಕ ವೆಂಕಟರವಣಪ್ಪ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಕುಂಟೆಗೆ ತಡೆಗೋಡೆ ನಿರ್ಮಿಸುವ ಸಲುವಾಗಿ ಸಣ್ಣ ನೀರಾವರಿ ಇಲಾಖೆಯಿಂದ ₹ 40 ಲಕ್ಷ ಅನುದಾನ ಮಂಜೂರಾಗಿದೆ. ಮಳೆಗಾಲದಲ್ಲಿ ಮಳೆ ನೀರು ಕುಂಟೆಗೆ ಸರಾಗವಾಗಿ ನೀರು ಹರಿದು ಬರಲು ಅನುಕೂಲವಾಗುವಂತೆ ₹ 15 ಲಕ್ಷ ವೆಚ್ಚದಲ್ಲಿ ಫೀಡರ್ ಚಾನೆಲ್ ಮಂಜೂರಾಗಿದೆ ಎಂದು ತಿಳಿಸಿದರು.
ಅಗಸರ ಕುಂಟೆ ಅಭಿವೃದ್ಧಿಪಡಿಸುವ ಸಲುವಾಗಿ ಹಂತ ಹಂತವಾಗಿ ಕಾಮಗಾರಿ ಆರಂಭಿಸಲಾಗುತ್ತಿದೆ. ಕಾಮಗಾರಿ ಮುಕ್ತಾಯವಾದ ಮೇಲೆ ವಾರಾಂತ್ಯದ ದಿನಗಳಲ್ಲಿ ಜನತೆಯ ಮನರಂಜನೆ ದೃಷ್ಟಿಯಿಂದ ಬೋಟಿಂಗ್ ವ್ಯವಸ್ಥೆ ಮಾಡಿಸಲಾಗುವುದು. ಕಣಿವೆ ಬಳಿ ಆರಂಭವಾಗಿರುವ ಸಾಲುಮರದ ತಿಮ್ಮಕ್ಕ ಉದ್ಯಾನದಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತಿದೆ. ಇಲಾಖೆಗೆ ಆದಾಯವೂ ಬರುತ್ತಿದೆ ಎಂದರು.
ಕುಂಟೆಗೆ ನಾಗಲಮಡಿಕೆಯಿಂದ ನೀರು ಹರಿಸಿರುವುದರಿಂದ ಪಟ್ಟಣದ ವ್ಯಾಪ್ತಿಯಲ್ಲಿ ಅಂತರ್ಜಲ ಹೆಚ್ಚಿದೆ. ಪ್ರತಿವರ್ಷ ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಿತ್ತು. ಈ ಬಾರಿ ಕೊಳವೆಬಾವಿಗಳಲ್ಲಿ ನೀರಿರುವುದರಿಂದ ಬೇಸಿಗೆಯಲ್ಲಿಯೂ ನೀರಿನ ಅಭಾವವಿಲ್ಲ ಎಂದು ತಿಳಿಸಿದರು.
ಪುರಸಭಾ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷೆ ಜಾಹ್ನವಿ, ಮುಖ್ಯಾಧಿಕಾರಿ ಅರ್ಚನಾ, ಸದಸ್ಯ ಸುದೇಶ್ ಬಾಬು, ರಾಜೇಶ್, ರವಿ, ವೇಲು, ವೆಂಕಟರವಣಪ್ಪ, ಗೀತಾ, ಸುಧಾಲಕ್ಷ್ಮಿ, ಮುಖಂಡ ಹನುಮಂತರಾಯಪ್ಪ, ಪ್ರಮೋದ್ ಕುಮಾರ್, ಎಂ.ಎಸ್. ವಿಶ್ವನಾಥ್, ಅವಿನಾಶ್, ಪರಮೇಶ್ವರ್, ಮೈಲಪ್ಪ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.