ತುಮಕೂರು: ತಾಲ್ಲೂಕಿನ ಕೈದಾಳ, ಬೈರಸಂದ್ರ, ಗೊಲ್ಲರಹಟ್ಟಿ, ಚೋಳಂಬಳ್ಳಿ ಗ್ರಾಮಗಳಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬಿ.ಸುರೇಶ್ಗೌಡ ಭೂಮಿ ಪೂಜೆ ನೆರವೇರಿಸಿದರು.

‘ಸಿ.ಸಿ ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿಗಾಗಿ ₹5 ಕೋಟಿ ವ್ಯಯಿಸಲಾಗುತ್ತಿದೆ. ಗೂಳೂರು– ಕೈದಾಳ ರಸ್ತೆ ನಿರ್ಮಾಣಕ್ಕೆ ₹2.50 ಕೋಟಿ ನೀಡಲಾಗಿದ್ದು, ಗುಣಮಟ್ಟದ ಕಾಮಗಾರಿಗೆ ಸೂಚಿಸಲಾಗಿದೆ. ಚನ್ನಕೇಶವ ಸ್ಮಾರಕ ಭವನಕ್ಕೆ ಅಂತಿಮ ರೂಪ ನೀಡುತ್ತಿದ್ದು, ಶೀಘ್ರದಲ್ಲೇ ಜನರ ಬಳಕೆಗೆ ನೀಡಲಾಗುವುದು’ ಎಂದರು.

ಗೊಲ್ಲರಹಟ್ಟಿ, ಚೋಳಂಬಳ್ಳಿ ಗ್ರಾಮಗಳಲ್ಲಿ ₹95 ಲಕ್ಷದಲ್ಲಿ ಜೆಜೆಎಂ ಕೆಲಸ ನಡೆಯುತ್ತಿದೆ. ಹರಳೂರು– ಬೈರಸಂದ್ರ ರಸ್ತೆ ನಿರ್ಮಾಣಕ್ಕೆ ₹1.60 ಕೋಟಿ ಖರ್ಚು ಮಾಡಲಾಗುತ್ತಿದೆ. ಕಾಮಗಾರಿಯಲ್ಲಿ ಲೋಪ ಆಗದಂತೆ ನೋಡಿಕೊಳ್ಳಬೇಕು. ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.

ಮುಖಂಡರಾದ ಶಿವಕುಮಾರ್ ಸಿದ್ದೇಗೌಡ, ಶಂಕರ್, ರಾಮಕೃಷ್ಣ, ಉಮಾಶಂಕರ್, ಜಾಕೀರ್, ರಘು, ರಾಜೇಶ್, ಗಿರೀಶ್, ಹನುಮಂತರಾಯಪ್ಪ, ಮಂಜುಳಮ್ಮ, ನಾಗರತ್ನಮ್ಮ, ಬಸವರಾಜು ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.