ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಿಗೇನಹಳ್ಳಿ | ಚಿರತೆ ದಾಳಿ: 23 ಕುರಿ ಸಾವು

Published : 17 ಸೆಪ್ಟೆಂಬರ್ 2024, 14:18 IST
Last Updated : 17 ಸೆಪ್ಟೆಂಬರ್ 2024, 14:18 IST
ಫಾಲೋ ಮಾಡಿ
Comments

ಕೊಡಿಗೇನಹಳ್ಳಿ: ಪುರವರ ಹೋಬಳಿ ದೊಡ್ಡಹೊಸಹಳ್ಳಿ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಚಿರತೆ ದಾಳಿ ನಡೆಸಿ 23 ಕುರಿಗಳನ್ನು ಕೊಂದಿದೆ.

ಕುರಿಗಾಹಿ ಮಲ್ಲಣ್ಣ ಅವರು ಕುರಿರೊಪ್ಪಕ್ಕೆ ಅಳವಡಿಸಿದ್ದ ಮೆಸ್ ಕಿತ್ತುಹಾಕಿ ಒಳ ನುಗ್ಗಿರುವ ಚಿರತೆಗಳು ಕುರಿಗಳ ಮೇಲೆ ದಾಳಿ ನಡೆಸಿವೆ.

ಕುರಿಗಳನ್ನೇ ನಂಬಿ ಜೀವನ ನಡೆಸುತ್ತಿದ್ದ ನನಗೆ ಕುರಿಗಳ ಸಾವಿನಿಂದ ದಿಕ್ಕುತೋಚದಂತಾಗಿದೆ ಸರ್ಕಾರ ಕೂಡಲೇ ಆರ್ಥಿಕ ಸಹಾಯ ನೀಡುವಂತೆ ಮನವಿ ಮಾಡಿದ್ದಾರೆ.

ವಲಯ ಅರಣ್ಯಾಧಿಕಾರಿ ಭೇಟಿ: ಸ್ಥಳಕ್ಕೆ ಭೇಟಿ ನೀಡಿದ್ದ ವಲಯ ಅರಣ್ಯಾಧಿಕಾರಿ ಎಚ್.ಎಂ. ಸುರೇಶ್ ಮಾತನಾಡಿ, ಚಿರತೆ ದಾಳಿಯಿಂದ 23 ಕುರಿಗಳು ಮೃತಪಟ್ಟಿವೆ. ಮೂರು ಕುರಿಗಳಿಗೆ ಗಾಯಗಳಾಗಿವೆ. ಇನ್ನು ನಾಲ್ಕು ಕುರಿಗಳನ್ನು ಚಿರತೆಗಳು ಹೊತ್ತುಕೊಂಡು ಹೋಗಿರುವ ಬಗ್ಗೆ ಕುರಿಗಾಹಿ ಮತ್ತು ಗ್ರಾಮಸ್ಥರು ಹೇಳಿದ್ದಾರೆ.

ಸತ್ತಿರುವ ಕುರಿಗಳಿಗೆ ಸರ್ಕಾರದಿಂದ ತಲಾ ₹5 ಸಾವಿರ ಪರಿಹಾರ ನೀಡುವುದರ ಜೊತೆಗೆ ಚಿರತೆಗಳನ್ನು ಹಿಡಿಯಲು ಬೋನು ಇಡುವ ಬಗ್ಗೆ ಇಲಾಖೆಯಿಂದ ಯೋಜನೆ ರೂಪಿಸಲಾಗುವುದು ಎಂದರು.

ಪಶು ಇಲಾಖೆ ಸಹಾಯಕ ನಿರ್ದೇಶಕ ಸಿದ್ಧನಗೌಡ, ಉಪ ವಲಯ ಅರಣ್ಯಾಧಿಕಾರಿ ಬಿ.ಎನ್. ಮುತ್ತುರಾಜು, ಪುರವರ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿಲೀಪ್ ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT