ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಮೇಲನಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ.
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಹಿಂಬದಿಯಿರುವ ಗುಡ್ಡದ ಬಳಿ ಚಿರತೆ ಮರಿಯೊಂದು ಓಡಾಡುತ್ತಿರುವ ಬಗ್ಗೆ ಶಾಲೆಯ ಭದ್ರತಾ ಸಿಬ್ಬಂದಿ ಸಿ. ಜಯರಂಗಯ್ಯ ಮಾಹಿತಿ ನೀಡಿದ್ದರು. ಅದರ ಆಧಾರದ ಮೇಲೆ ಬೋನ್ ಇಡಲಾಗಿತ್ತು.
ಶುಕ್ರವಾರ ಬೆಳಿಗ್ಗೆ ಜಯರಂಗಯ್ಯನವರು ಚಿರತೆ ಬೋನಿಗೆ ಬಿದ್ದಿರುವುದನ್ನು ಗಮನಿಸಿ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿಂದ ಚಿರತೆಯನ್ನು ಹೊಸಹಳ್ಳಿ ನರ್ಸರಿ ಫೀಲ್ಡ್‌ಗೆ ಸಾಗಿಸಿದ್ದಾರೆ.
ಒಂದೂವರೆ ವರ್ಷ ವಯಸ್ಸಿನ ಈ ಚಿರತೆಯ ಲಿಂಗಪತ್ತೆಗೆ ಅದು ಅವಕಾಶವೇ ಮಾಡಿಕೊಡುತ್ತಿಲ್ಲ. ಮೇಲ್ಮೈ ಲಕ್ಷಣಗಳ ಆಧಾರದಿಂದ ಹೆಣ್ಣುಚಿರತೆ ಎಂದು ಗುರ್ತಿಸಬಹುದು. ಅದನ್ನು ಕಾಡಿಗೆ ಬಿಡಬೇಕೊ ಅಥವಾ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಕಳಿಕೊಡಬೇಕೊ ಎಂಬುದನ್ನು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಸಮಾಲೋಚಿಸಿ ತೀರ್ಮಾನಿಸಲಾಗುವುದು ಎಂದು ಅರಣ್ಯ ಸಂರಕ್ಷಣಾಧಿಕಾರಿ ಅರುಣ್ ತಿಳಿಸಿದರು.
ತಾಲ್ಲೂಕು ಪಶು ಸಹಾಯಕ ನಿರ್ದೇಶಕ ಡಾ.ರೆ ಮಾ ನಾಗಭೂಷಣ್ ಚಿರತೆಯ ವೈದ್ಯಕೀಯ ಪರೀಕ್ಷೆ ನಡೆಸಿದರು.
ಚಿರತೆ ಮಾಹಿತಿ ಕೊಟ್ಟ ಶಾಲೆಯ ಸೆಕ್ಯುರಿಟಿ ಸಿ ಜಯರಂಗಯ್ಯನವರೊಂದಿಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮೇಲನಹಳ್ಳಿ
ಡಾ ರೆ ಮಾನಾಗಭೂಷಣ್ ಪಶು ಸಹಾಯಕ ನಿರ್ದೇಶಕರು ಚಿಕ್ಕನಾಯಕನಹಳ್ಳಿ
ಅರುಣ್ ವಲಯ ಅರಣ್ಯ ಸಂರಕ್ಷಣಾಧಿಕಾರಿ ಚಿಕ್ಕನಾಯಕನಹಳ್ಳಿ