ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರುವೇಕೆರೆ: ಜೀವರಕ್ಷಕ ಔಷಧಿ ವಿತರಣೆ

Last Updated 11 ಮೇ 2021, 4:15 IST
ಅಕ್ಷರ ಗಾತ್ರ

ತುರುವೇಕೆರೆ: ಜನರ ಹಿತದೃಷ್ಟಿಯಿಂದ ₹11 ಲಕ್ಷ ವೆಚ್ಚದ ಕೋವಿಡ್ ಜೀವರಕ್ಷಕ ಔಷಧಿಗಳನ್ನು ಸ್ವಂತ ಹಣದಲ್ಲಿ ಖರೀದಿಸಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ನೀಡಲಾಗುತ್ತಿದೆ ಎಂದು ಶಾಸಕ ಮಸಾಲ ಜಯರಾಂ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೋವಿಡ್ ಜೀವರಕ್ಷಕ ಔಷಧಿಗಳ ಉಚಿತ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎರಡು ಸಾವಿರ ಪಿಪಿಇ ಕಿಟ್ ಕವರ್‌ಗಳು, 5 ಸಾವಿರ ಜಿನ್ ಮಾತ್ರೆ, ಐದು ಸಾವಿರ ಮಿಟಮಿನ್ ಮಾತ್ರೆ, 4 ಸಾವಿರ ಮಾಸ್ಕ್‌, ಸ್ಯಾನಿಟೈಸರ್, ಬೆಡಶೀಟ್, ಎರಡುವರೆ ಸಾವಿರ ಕೈಗವಸ, ಶೂಕವರ್, 2 ಸಾವಿರ ಹೆಡ್ ಕ್ಯಾಪ್, ಮಾತ್ರೆಗಳನ್ನು ನೀಡಲಾಯಿತು.

ಕೋವಿಡ್ ರೋಗ ಲಕ್ಷಣ ಬಂದ ತಕ್ಷಣ ಕೂಡಲೇ ಮನೆಯಲ್ಲಿಯೇ ಉಳಿಯದೇ ಆಸ್ಪತ್ರೆಗೆ ದಾಖಲಾಗಿ. ಅನಗತ್ಯ ಓಡಾಡಬೇಡಿ. ಔಷಧಿಗಳಿಗೆ ಎಷ್ಟೇ ಖರ್ಚಾದರೂ ನನ್ನ ಸ್ವಂತ ಹಣದಿಂದ ಕೊಡಲು ಸಿದ್ಧನಿದ್ದೇನೆ ಎಂದರು.

ತಾಲ್ಲೂಕಿನ ನೂರಾರು ಜನರಿಗೆ ಬೆಂಗಳೂರು, ತುಮಕೂರು, ಮೈಸೂರು ಇನ್ನಿತರ ಕಡೆಗಳಲ್ಲಿ ಬೆಡ್ ಮತ್ತು ಆಮ್ಲಜನಕದ ವ್ಯವಸ್ಥೆ ಮಾಡಿಸಿದ್ದೇನೆ. ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಕೋವಿಡ್ ನಿಯಂತ್ರಣಕ್ಕೆ ತಮ್ಮ ಶಕ್ತಿ ಮೀರಿ ಪ್ರಯತ್ನ ನಡೆಸುತ್ತಿದ್ದಾರೆ. ಅವರೊಂದಿಗೆ ರೋಗಿಗಳು ಸೌಜನ್ಯತೆಯಿಂದ ನಡೆದುಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಂಜನ್‌ಕುಮಾರ್, ಸದಸ್ಯ ಚಿದಾನಂದ್, ವೈದ್ಯಾಧಿಕಾರಿ ಡಾ.ಶ್ರೀಧರ್, ಡಾ.ಸುಪ್ರಿಯಾ, ಕೊಂಡಜ್ಜಿ ವಿಶ್ವನಾಥ್, ವಿ.ಟಿ.ವೆಂಕಟರಾಮ್, ವಿ.ಬಿ.ಸುರೇಶ್, ಸೋಮಣ್ಣ, ಮುದ್ದೇಗೌಡ, ವೈದ್ಯರುಗಳಾದ ಡಾ.ನವೀನ್, ಡಾ.ಪವನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT