ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಚಿ ಸಾಹಿತ್ಯ ಪ್ರಶಸ್ತಿ ಪ್ರದಾನ

Last Updated 23 ಫೆಬ್ರುವರಿ 2020, 7:40 IST
ಅಕ್ಷರ ಗಾತ್ರ

ತುಮಕೂರು: ವೀಚಿ ಸಾಹಿತ್ಯ ಪ್ರತಿಷ್ಠಾನದಿಂದ ಎಸ್.ಗಂಗಾಧರಯ್ಯ ಅವರ 'ದೇವರ ಕುದುರೆ' ಕಥಾ ಸಂಕಲನ ಮತ್ತು ಸುರೇಶ್ ನಾಗಲಮಡಿಕೆ ಅವರ 'ಹಲವು ಬಣ್ಣದ ಹಗ್ಗ' ವಿಮರ್ಶಾಕೃತಿಗಳಿಗೆ 'ವೀಚಿ ಸಾಹಿತ್ಯ ಪ್ರಶಸ್ತಿ-2019' ಪ್ರದಾನ ಮಾಡಲಾಯಿತು.

ಇವರೊಂದಿಗೆ ಭುವನಾ ಹಿರೇಮಠ ಅವರ 'ಟ್ರಯಲ್ ರೂಮಿನ ಅಪ್ಸರೆಯರು' ಕವನ ಸಂಕಲನಕ್ಕೆ 'ವೀಚಿ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ-2019', ಮೂಡಲಪಾಯ ಯಕ್ಷಗಾನ ಕಲಾವಿದ ಸಿ.ಎನ್.ಹನುಮಯ್ಯ ಅವರಿಗೆ 'ವೀಚಿ ಜಾನಪದ ಪ್ರಶಸ್ತಿ', ಡಿ ದರ್ಜೆ ನೌಕರ ಎಂ.ಆರ್.ವೆಂಕಟೇಶ್ ಅವರಿಗೆ 'ಕನಕಕಾಯಕ ಪ್ರಶಸ್ತಿ' ಪ್ರದಾನ ಮಾಡಲಾಯಿತು.

ತುಮಕೂರು ಕನ್ನಡ ಭವನದಲ್ಲಿ ನಡೆದ ಸಮಾರಂಭದಲ್ಲಿ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು. ವೀಚಿ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಸವಯ್ಯ ಹಾಗೂ ವೀಚಿ ಕುಟುಂಬಸ್ಥರು ಇದ್ದರು.

ಪ್ರಶಸ್ತಿ ಪುರಸ್ಕೃತರ ಹಾಗೂ ಅವರ ಕೃತಿಗಳ ಕುರಿತು ಲೇಖಕರಾದ ಡಾ.ಕರಿಗೌಡ ಬೀಚನಹಳ್ಳಿ, ಡಾ.ವಸುಂದರಾ ಭೂಪತಿ, ಡಾ.ರವಿಕುಮಾರ್ ನೀಹ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT