ಬುಧವಾರ, ಅಕ್ಟೋಬರ್ 21, 2020
21 °C

ನಿವೇಶನ; ಹೋರಾಟ ತೀವ್ರಗೊಳಿಸಲು ಕೊಳೆಗೇರಿ ಸಮಿತಿ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ನಗರದ ಕೊಳೆಗೇರಿಗಳಲ್ಲಿ ವಾಸಿಸುತ್ತಿರುವ ನಿವೇಶನ ರಹಿತರಿಗೆ ಸೂರು ಕಲ್ಪಿಸುವಂತೆ ಆಗ್ರಹಿಸಿ ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದೆ.

ನಗರ ವಂಚಿತ ಯುವಜನ ಸಂಪನ್ಮೂಲ ಕೇಂದ್ರದಲ್ಲಿ ನಡೆದ ಸಭೆಯಲ್ಲಿ, ನಿವೇಶನಕ್ಕಾಗಿ ಪ್ರತ್ಯೇಕ ಹೋರಾಟ ರೂಪಿಸಲು ಮುಖಂಡರು ನಿರ್ಣಯಕೈಗೊಂಡರು.

‘ನಮ್ಮ ಮನೆ ಹೋರಾಟ’ ಸಮಿತಿಯ ಹೋರಾಟದ ಫಲವಾಗಿ ಜಿಲ್ಲಾಧಿಕಾರಿ ಮತ್ತು ನಗರ ಶಾಸಕರು ಸರ್ಕಾರಿ ಭೂಮಿ ಗುರುತಿಸುವಂತೆ ತಹಶೀಲ್ದಾರ್ ಅವರಿಗೆ ನಿರ್ದೇಶನ ನೀಡಿದ್ದರು. ಹೊನ್ನೇನಹಳ್ಳಿ, ಪಿ.ಎನ್.ಆರ್.ಪಾಳ್ಯ ಮತ್ತು ಮರಳೇನಹಳ್ಳಿ ವಾರ್ಡ್‍ಗಳಲ್ಲಿ ಸರ್ಕಾರಿ ಭೂಮಿ ಹದ್ದುಬಸ್ತು ಕಾರ್ಯ ನಡೆಯುತ್ತಿದೆ. ಹೆಬ್ಬಾಕ ಮತ್ತು ಊರುಕೆರೆ ಸಮೀಪ ಸರ್ಕಾರದಿಂದ ವಸತಿ ಸಮುಚ್ಛಯ ನಿರ್ಮಾಣಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಇಲ್ಲಿ 2016-17ರಲ್ಲಿ ನಿವೇಶನಕ್ಕೆ ಅರ್ಜಿ ಸಲ್ಲಿಸಿರುವ ಕುಟುಂಬಗಳಿಗೆ ನಿವೇಶನ ಹಂಚಿಕೆ ಆಗುತ್ತದೆ ಎಂದು ಸಮಿತಿ ಮುಖಂಡರು ಸಭೆಗೆ ವಿವರಿಸಿದರು.

ನಿವೇಶನರಹಿತರ ಬಗ್ಗೆ ಪಾಲಿಕೆ ಕಂದಾಯ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದಾರೆ. ಸಮೀಕ್ಷೆ ನೆಪದಲ್ಲಿ ಮಧ್ಯವರ್ತಿಗಳು ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಕೈಗೊಳ್ಳಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಜಿಲ್ಲೆಯಲ್ಲಿ ಇದುವರೆಗೂ ಘೋಷಣೆ ಆಗಿರುವ ಎಲ್ಲ ಕೊಳೆಗೇರಿಗಳ ಜನರಿಗೆ ಹಕ್ಕುಪತ್ರ ನೀಡಲು ಜಿಲ್ಲಾಡಳಿತ ಕ್ರಮವಹಿಬೇಕು ಎಂದು ಒತ್ತಾಯಿಸಲಾಯಿತು.

ದೀಪಿಕಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಪದಾಧಿಕಾರಿಗಳಾದ ಎ.ನರಸಿಂಹಮೂರ್ತಿ, ಅರುಣ್, ರಂಗನಾಥ್, ಶಂಕರಯ್ಯ, ಹಯತ್‍ಸಾಬ್, ತಿರುಮಲಯ್ಯ, ಮಂಗಳಮ್ಮ, ಕೆಂಪಣ್ಣ, ಶಾಬುದ್ದೀನ್, ದನಂಜಯ, ಗಂಗಮ್ಮ, ಕೃಷ್ಣ, ಮುರುಗ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು