ಗುರುವಾರ , ಮಾರ್ಚ್ 4, 2021
29 °C
ಕಿತ್ತಳೆ ವಲಯದಲ್ಲಿ ಜಿಲ್ಲೆ, ತುಮಕೂರು ನಗರದಲ್ಲಿ ಎಂದಿನಂತೆ ಲಾಕ್‌ಡೌನ್‌ ಮುಂದುವರಿಕೆ

ಗ್ರಾಮೀಣ ಭಾಗದಲ್ಲಿ ಚಟುವಟಿಕೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕೇಂದ್ರ ಮತ್ತು ರಾಜ್ಯ ಸರ್ಕಾರ ಜಿಲ್ಲೆಯನ್ನು ಕಿತ್ತಳೆ ವಲಯ ಎಂದು ಘೋಷಿಸಿದ್ದು, ತುಮಕೂರು ನಗರ ಹೊರತುಪಡಿಸಿ ಜಿಲ್ಲೆಯೆಲ್ಲೆಡೆ ಬಹುತೇಕ ಚಟುವಟಿಕೆಗಳಿಗೆ ಸೋಮವಾರದಿಂದ (ಮೇ 4) ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಅಂಗಡಿ ಮತ್ತು ಖಾಸಗಿ ಉದ್ಯಮಗಳಲ್ಲಿ ಮಾಸ್ಕ್‌ ಧರಿಸಬೇಕು. ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ. ಮಾಸ್ಕ್‌ ಧರಿಸದೆ ವ್ಯಾಪಾರ ನಡೆಸುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಎಚ್ಚರಿಸಿದರು.

ಜಿಲ್ಲೆಯಲ್ಲಿ ಷರತ್ತಿಗೆ ಒಳಪಟ್ಟು ಕ್ಷೌರಿಕ ಹಾಗೂ ಸಲೂನ್‌ಗಳಿಗೆ ಅವಕಾಶ ಕಲ್ಪಿಸಲಾಗಿದೆ. ತುಮಕೂರು ನಗರದಲ್ಲಿ ಕ್ಷೌರಿಕ ಅಂಗಡಿ, ಸೆಲೂನ್‌ಗಳಿಗೂ ಅವಕಾಶ ನೀಡುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು. ಉಳಿದಂತೆ ಜಿಲ್ಲೆಯಾದ್ಯಂತ ಶಾಪಿಂಗ್ ಮಾಲ್‌ಗಳು, ಧಾರ್ಮಿಕ ಪ್ರದೇಶಗಳು, ಮನರಂಜನೆ ಕೆಂದ್ರಗಳು, ಈಜು, ಜಿಮ್‌, ಉದ್ಯಾನಗಳಿಗೆ ಅವಕಾಶ ಇಲ್ಲ ಎಂದು ತಿಳಿಸಿದರು.

ತುಮಕೂರು ನಗರ ಹೊರತುಪಡಿಸಿ ಜಿಲ್ಲೆಯೆಲ್ಲೆಡೆ ಸಿ.ಎಲ್‌–2, ಸಿ.ಎಲ್‌–11 ಪರವಾನಗಿ ಹೊಂದಿರುವ ಮದ್ಯದಂಗಡಿಗಳು ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

164 ಮಂದಿ ಮೇಲೆ ನಿಗಾ: ಕೊರೊನಾ ಸೋಂಕು ದೃಢಪಟ್ಟ ಪಿ–591 ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 54 ಜನರನ್ನು ಗುರುತಿಸಿದ್ದೇವೆ. ಪಿ–592 ರೋಗಿಯೊಂದಿಗೆ 7 ಮಂದಿ ಪ್ರಾಥಮಿಕ ಸಂಪರ್ಕದಲ್ಲಿದ್ದು, ಇವರೆಲ್ಲರನ್ನೂ ಐಸೊಲೇಷನ್‌ನಲ್ಲಿ ಇರಿಸಲಾಗಿದೆ. 164 ಮಂದಿ ದ್ವಿತೀಯ ಸಂಪರ್ಕದಲ್ಲಿದ್ದು, ಇವರೆಲ್ಲರಿಗೂ ಆರೋಗ್ಯ ತಪಾಸಣೆ ನಡೆಸಿ, ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ ಎಂದು ವಿವರಿಸಿದರು.

----

ವಲಸಿಗರು ತೆರಳಲು ಅವಕಾಶ

ವಲಸಿಗರು ತೆರಳಲು ಅವಕಾಶ ಕಲ್ಪಿಸಲಾಗಿದೆ. ತೆರಳುವವರು ಸೋಮವಾರ ಬೆಳಿಗ್ಗೆ 9 ರಿಂದ ತುಮಕೂರು ಬಸ್‌ ನಿಲ್ದಾಣದಿಂದ ಹೊರಡಲು ಅವಕಾಶ ಕಲ್ಪಿಸಲಾಗಿದೆ. ಬರುವಾಗ ಆರೋಗ್ಯ ತಪಾಸಣೆ ಮತ್ತು ಪೋಟೋ ಗುರುತಿನ ಚೀಟಿಯೊಂದಿಗೆ ಬರುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಒಂದು ಬಸ್‌ನಲ್ಲಿ ಶೇ 40 ರಿಂದ 50 ರಷ್ಟು ಸೀಟ್‌ಗಳನ್ನು ಭರ್ತಿ ಮಾಡಲು ಅವಕಾಶವಿದ್ದು, ಬಸ್‌ಗಳ ಸಮಯ ನಿಗದಿ ಪಡಿಸಿಲ್ಲ. ಎಷ್ಟು ಜನ ಯಾವ ಊರಿಗೆ ತೆರಳಲಿದ್ದಾರೆ ಎಂಬುದನ್ನು ಪರಿಶೀಲಿಸಿ ಡಿಪೋ ಮ್ಯಾನೇಜರ್ ಹಾಗೂ ಕೆಎಸ್‌ಆರ್‌ಟಿಸಿ ಜಿಲ್ಲಾಧಿಕಾರಿ ನಿರ್ಧರಿಸಲಿದ್ದಾರೆ ಎಂದು ಅವರು ತಿಳಿಸಿದರು.

---

ತಹಶೀಲ್ದಾರ್‌ ಕಚೇರಿಯಲ್ಲಿ ಪಾಸ್‌

ಸಾರ್ವಜನಿಕರು ಹೊರ ಜಿಲ್ಲೆಗಳಿಗೆ ತೆರಳುವ ಸಾರ್ವಜನಿಕರಿಗೆ ಒನ್‌ ಡೇ, ಒನ್‌ ವೇ, ಒನ್‌ ಟೈಮ್‌ ಪಾಸ್‌ ನೀಡಲು ಅವಕಾಶ ಕಲ್ಪಿಸಿದ್ದು, ಜಿಲ್ಲೆಯಾದ್ಯಂತ ತಹಶೀಲ್ದಾರ್ ಕಚೇರಿಯಲ್ಲಿ ಪಾಸ್‌ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದರು.

----

164 ಮಂದಿ ಮೇಲೆ ನಿಗಾ

ಕೊರೊನಾ ಸೋಂಕು ದೃಢಪಟ್ಟ ಪಿ–591 ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿ 54 ಜನ ಗುರುತಿಸಿದ್ದೇವೆ. ಅಲ್ಲದೆ, ಪಿ–592 ವ್ಯಕ್ತಿಯೊಂದಿಗೆ 7 ಮಂದಿ ಪ್ರಾಥಮಿಕ ಸಂಪರ್ಕದಲ್ಲಿದ್ದು, ಇವರೆಲ್ಲರನ್ನೂ ಐಸೋಲೇಷನ್‌ನಲ್ಲಿ ಇಡಲು ಕ್ರಮ ವಹಿಸಲಾಗಿದೆ. ಇವರೊಂದಿಗೆ 164 ಮಂದಿ ದ್ವಿತೀಯ ಸಂಪರ್ಕದಲ್ಲಿದ್ದು, ಇವರೆಲ್ಲರಿಗೂ ಆರೋಗ್ಯ ತಪಾಸಣೆ ನಡೆಸಿ, ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು