ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಇಂದು ಮತದಾನ; ಬಿಗಿ ಭದ್ರತೆ

ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಮಹಿಳೆಯರೇ ನಿರ್ಣಾಯಕ
Published 26 ಏಪ್ರಿಲ್ 2024, 4:23 IST
Last Updated 26 ಏಪ್ರಿಲ್ 2024, 4:23 IST
ಅಕ್ಷರ ಗಾತ್ರ

ತುಮಕೂರು: ಲೋಕಸಭೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಲಿದ್ದು, ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಚುನಾವಣೆಗೆ ಜಿಲ್ಲಾ ಆಡಳಿತ ಸಕಲ ರೀತಿಯಲ್ಲೂ ಸಜ್ಜುಗೊಂಡಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ.

ವಿದ್ಯುನ್ಮಾನ ಮತಯಂತ್ರಗಳನ್ನು ಪಡೆದುಕೊಂಡ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗಳು ಗುರುವಾರ ಸಂಜೆ ವೇಳೆಗೆ ಮತಗಟ್ಟೆ ಕೇಂದ್ರಗಳನ್ನು ತಲುಪಿಸಿದರು. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ 2,618 ಮತಗಟ್ಟೆಗಳಿಗೆ 10,472 ಮತಗಟ್ಟೆ ಸಿಬ್ಬಂದಿ, ಅಧಿಕಾರಿಗಳು, 2,618 ಗ್ರೂಪ್ ಡಿ ನೌಕರರು ಹಾಗೂ 610 ವೀಕ್ಷಕರನ್ನು ನಿಯೋಜಿಸಲಾಗಿದೆ.

ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಒಟ್ಟು 1,846 ಮತಗಟ್ಟೆ ಸ್ಥಾಪಿಸಲಾಗಿದೆ. ಚಿತ್ರದುರ್ಗ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಶಿರಾ, ಪಾವಗಡ ತಾಲ್ಲೂಕಿನಲ್ಲಿ 507, ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಕುಣಿಗಲ್ ತಾಲ್ಲೂಕಿನಲ್ಲಿ 265 ಮತಗಟ್ಟೆ ಸೇರಿದಂತೆ ಇಡೀ ಜಿಲ್ಲೆಯ 2,618 ಮತಗಟ್ಟೆಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. 546 ಕ್ರಿಟಿಕಲ್ ಮತಗಟ್ಟೆ ಸೇರಿ ಒಟ್ಟು 1,312 ಮತಗಟ್ಟೆಗಳು ವೆಬ್‌ಕಾಸ್ಟಿಂಗ್ ವ್ಯವಸ್ಥೆಗೆ ಒಳಪಡಲಿವೆ.

ತುಮಕೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 16,61,309 ಮತದಾರರು ಇದ್ದಾರೆ. ಅದರಲ್ಲಿ ಪುರುಷರು 8,19,065, ಮಹಿಳೆಯರು 8,42,170 ಹಾಗೂ ತೃತೀಯ ಲಿಂಗಿಗಳು 74 ಮಂದಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ತುಮಕೂರು ನಗರದಲ್ಲಿ ಅತಿ ಹೆಚ್ಚು 2,68,012 ಮತದಾರರು, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 2,21,567 ಹಾಗೂ ಅತಿ ಕಡಿಮೆ ಗುಬ್ಬಿ ತಾಲ್ಲೂಕಿನಲ್ಲಿ 1,83,712 ಮತದಾರರು ಇದ್ದಾರೆ.

ಮಾದರಿ ಮತಗಟ್ಟೆ: ಸಖಿ ಮಾದರಿ ಮತಗಟ್ಟೆ, ಯುವ ಮತಗಟ್ಟೆ, ಅಂಗವಿಕಲರ ಮತ ಕೇಂದ್ರ, ವಿಶೇಷ ಥೀಮ್‍ಗಳನ್ನು ಒಳಗೊಂಡ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತಗಟ್ಟೆಗಳ ಬಳಿ ಅಂಗವಿಕಲರಿಗೆ ವ್ಹೀಲ್ ಚೇರ್, ಇತರೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಮತದಾರರ ವಿವರ

ವಿಧಾನಸಭಾ ಕ್ಷೇತ್ರ;ಪುರುಷರು;ಮಹಿಳೆಯರು;ಇತರೆ;ಒಟ್ಟು

ಚಿಕ್ಕನಾಯಕನಹಳ್ಳಿ;1,09,586;1,11,979;2;2,21,567

ತಿಪಟೂರು;90,340;96,305;2;1,86,647

ತುರುವೇಕೆರೆ;91,608;92,960;0;1,84,568

ತುಮಕೂರು ನಗರ;1,30,688;1,37,297;27;2,68,012

ಗ್ರಾಮಾಂತರ;1,04,994;1,08,591;16;2,13,601

ಕೊರಟಗೆರೆ;1,02,837;1,04,513;11;2,07,361

ಗುಬ್ಬಿ;91,196;92,506;10;1,83,712

ಮಧುಗಿರಿ;97,816;98,019;6;1,95,841

ಒಟ್ಟು;8,19,065;8,42,170;74;16,61,309

**

ಚಿತ್ರದುರ್ಗ ಕ್ಷೇತ್ರ

ಶಿರಾ;1,14,525;1,13,950;8;2,28,484

ಪಾವಗಡ;1,00,873;97,358;9;1,98,240

**

ಬೆಂಗಳೂರು ಗ್ರಾಮಾಂತರ

ಕುಣಿಗಲ್;1,01,510;1,01,716;2;2,03,228

ತುಮಕೂರಿನ ಜೂನಿಯರ್ ಕಾಲೇಜು ಮೈದಾನದಿಂದ ಗುರುವಾರ ಮತದಾನದ ಸಾಮಗ್ರಿಗಳೊಂದಿಗೆ ಮತಗಟ್ಟೆಯತ್ತ ತೆರಳಿದ ಸಿಬ್ಬಂದಿ
ತುಮಕೂರಿನ ಜೂನಿಯರ್ ಕಾಲೇಜು ಮೈದಾನದಿಂದ ಗುರುವಾರ ಮತದಾನದ ಸಾಮಗ್ರಿಗಳೊಂದಿಗೆ ಮತಗಟ್ಟೆಯತ್ತ ತೆರಳಿದ ಸಿಬ್ಬಂದಿ

ಮಹಿಳೆಯರು ನಿರ್ಣಾಯಕ

ತುಮಕೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಹಿಳಾ ಮತದಾರರೇ ನಿರ್ಣಾಯಕ ಸ್ಥಾನದಲ್ಲಿ ಇದ್ದಾರೆ. ಒಟ್ಟು 842170 ಮಂದಿ ಮಹಿಳಾ (ಪುರುಷರು 819065) ಮತದಾರರು ಇದ್ದಾರೆ. ಪುರುಷರಿಗಿಂತ 23105 ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹಿಂದಿನ ಚುನಾವಣೆಯಲ್ಲಿ ಮಹಿಳಾ ಮತದಾರರ ಸಂಖ್ಯೆ ಸ್ವಲ್ಪ ಹೆಚ್ಚು ಕಡಿಮೆ ಪುರುಷ ಮತದಾರರಷ್ಟು ಇಲ್ಲವೆ ಸಮ ಪ್ರಮಾಣದಲ್ಲೇ ಇರುತಿತ್ತು. ಆದರೆ ಈ ಬಾರಿ ಮಹಿಳೆಯರ ಸಂಖ್ಯೆ 23 ಸಾವಿರದಷ್ಟು ಹೆಚ್ಚಳವಾಗಿದೆ.

ಯುವ ಮತದಾರರು

ತುಮಕೂರು: ಯುವ ಮತದಾರರೂ ಈ ಬಾರಿ ತಮ್ಮ ಛಾಪು ಮೂಡಿಸಲು ಸಜ್ಜಾಗಿದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿ 31829 ಯುವ ಮತದಾರರು ಇದ್ದಾರೆ. ಇವರೆಲ್ಲ ಇದೇ ಮೊದಲ ಬಾರಿಗೆ ಮತದಾನ ಮಾಡುತ್ತಿದ್ದಾರೆ. ಆದರೆ ಒಟ್ಟು ಯುವ ಮತದಾರರ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ ದೊಡ್ಡ ಸಂಖ್ಯೆಯಲ್ಲೇ ಇದೆ. ಪ್ರಮುಖವಾಗಿ ಈ ಬಾರಿ ಅಭ್ಯರ್ಥಿಗಳ ಸೋಲು– ಗೆಲುವನ್ನು ಯುವ ಮತದಾರರು ನಿರ್ಧರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT