ತುಮಕೂರು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಇಳಿಕೆ ಮಾಡುವಂತೆ ಆಗ್ರಹಿಸಿ ಜಿಲ್ಲಾ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಲಾರಿ ಮಾಲೀಕರು ಜಾಸ್ ಟೋಲ್ ಸಮೀಪ ಶುಕ್ರವಾರ ಸಾಂಕೇತಿಕವಾಗಿ ಪ್ರತಿಭಟಿಸಿದರು.

ಲಾರಿ ಮಾಲೀಕರ ರಾಜ್ಯ ಸಂಘ ಲಾರಿ ಮುಷ್ಕರಕ್ಕೆ ಕರೆ ನೀಡಿದ್ದು, ಜಿಲ್ಲೆಯಲ್ಲೂ ಲಾರಿಗಳು, ಸರಕು ಸಾಗಣೆ ವಾಹನಗಳು ಸಂಚರಿಸಲಿಲ್ಲ. ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಸಂಘದ ಅಧ್ಯಕ್ಷ ಮುಜ್ಬೀಲ್ ಪಾಷ, ‘ಕೇಂದ್ರ ಸರ್ಕಾರ ರೂಪಿಸು
ತ್ತಿರುವ ಕಾನೂನುಗಳು ಲಾರಿ ಮಾಲೀಕರಿಗೆ ಸಂಕಷ್ಟವನ್ನುಂಟು ಮಾಡುತ್ತಿವೆ. ದಿನೆದಿನೇ ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು, ಸರಕು ಸಾಗಣೆ ಕಷ್ಟಕರವಾಗಿದೆ. ಕೇಂದ್ರ ಸರ್ಕಾರ ದಿನಕ್ಕೊಂದು ಕಾನೂನು ರೂಪಿಸುತ್ತಿದೆ’ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ‘ಇವೇ ಬಿಲ್’ನಲ್ಲಿ ಸರಿಯಾದ ಸಮಯಕ್ಕೆ ಲಾರಿ ಓಡಿಸಲು ಆಗುವುದಿಲ್ಲ. ಸಮಯಕ್ಕೆ ಹೋಗದಿದ್ದರೆ ಲಾರಿ ಮಾಲೀಕರು, ಸರಬರಾಜುದಾರರಿಗೆ ದಂಡ ವಿಧಿಸಲಾಗುತ್ತದೆ. ದಿನಕ್ಕೆ 200 ಕಿ.ಮೀ ಓಡಾಟಕ್ಕೆ ಅವಕಾಶ ನೀಡಿರುವ ಇವೇ ಕಾನೂನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಲಾರಿ ಮಾಲೀಕರು ವಿಷ ಕುಡಿಯುವಂತಹ ಪರಿಸ್ಥಿತಿ ನಿರ್ಮಾಣ
ವಾಗಿದೆ. ರೈತರು ಕಳೆದ ಮೂರು ತಿಂಗಳಿಂದ ಹೋರಾಡುತ್ತಿದ್ದರೂ ಸ್ಪಂದಿಸುತ್ತಿಲ್ಲ. ಅಚ್ಛೇದಿನ್ ಬರಲಿಲ್ಲ. ಬುಲೆಟ್ ಟ್ರೈನ್ ಬದಲಾಗಿ ಇರುವ ರೈಲುಗಳನ್ನೇ ಮಾರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

‘ಹಳೆ ವಾಹನಗಳ ಸಂಚಾರ ರದ್ದು
ಗೊಳಿಸಿದರೆ ಲಾರಿ ಮಾಲೀಕರು ಎಲ್ಲಿಗೆ ಹೋಗಬೇಕು. ಹಳೆವಾಹನಗಳಿಂದ ಪರಿಸರಕ್ಕೆ ಹಾನಿಯಾಗುತ್ತಿದ್ದರೆ ವಾಹನಗಳ ಎಂಜಿನ್ ಬದಲಾಯಿಸಲು ಸಿದ್ಧರಿದ್ದೇವೆ. ಅದು ಬಿಟ್ಟು ಇಡೀ ವಾಹನವನ್ನೇ ರದ್ದಿಗೆ ಹಾಕಿದರೆ ಏನು ಪ್ರಯೋಜನ’ ಎಂದು ಪ್ರಶ್ನಿಸಿದರು.

ಸಂಘದ ಮುಖಂಡರಾದ ಶಕೀಲ್, ಯೂಸೂಫ್, ಪರ್ವೀಜ್, ರಘು, ದಯಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.