ಶನಿವಾರ, ಏಪ್ರಿಲ್ 1, 2023
29 °C

ಪಿತೃಪಕ್ಷದ ಅಮವಾಸ್ಯೆ: ಮರಿ ಮಾರಾಟ ಭರ್ಜರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುರುವೇಕೆರೆ: ಪಿತೃಪಕ್ಷದ ಅಮವಾಸ್ಯೆಯ ಹಬ್ಬದ ಕಾರಣ ಪಟ್ಟಣದ ಎಪಿಎಂಸಿ ಆವರಣದ ಮರಿಮಾರು ಕಟ್ಟೆಯಲ್ಲಿ ಮೇಕೆ ಮಾರಾಟ ಭರ್ಜರಿಯಾಗಿ ನಡೆಯಿತು.

ಬುಧವಾರ ಅಮವಾಸ್ಯೆ ಹಬ್ಬಿರುವುದರಿಂದ ಸೋಮವಾರದ ಮರಿ ಸಂತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೇಕೆ, ಕುರಿ, ಸಿಂದೂರು ಆಡುಗಳನ್ನು ರೈತರು ಮತ್ತು ವ್ಯಾಪಾರಿಗಳು ತಂದಿದ್ದರು.

ಸ್ಥಳೀಯ ಹೋತ, ಮೇಕೆ ಹಾಗೂ ಟಗರುಗಳಿಗೆ ಹೆಚ್ಚು ಬೇಡಿಕೆ ಇತ್ತು. 

ಸಂತೆಗೆ ಕಡಿಮೆ ಸಂಖ್ಯೆಯ ಮೇಕೆಗಳು ಪೂರೈಕೆಯಾಗಿದ್ದು, ಕೊಳ್ಳವವರು ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದರಿಂದ 10 ಕೆ.ಜಿ ತೂಕದ ಮೇಕೆಗಳಿಗೂ ₹16 ಸಾವಿರದಿಂದ ₹17 ಸಾವಿರ ಬೆಲೆಯಿತ್ತು. ದಷ್ಟಪುಷ್ಟ ಆಡು, ಹೋತಗಳಿಗೆ ₹30 ಸಾವಿರದಿಂದ ₹40 ಸಾವಿರದವರೆಗೂ ಬೆಲೆ ಇತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು