ಮಹಿಳೆಯರು ಆರೋಗ್ಯ ಸೌಲಭ್ಯ ತಪ್ಪದೇ ಪಡೆಯಲಿ: ಸಿಇಓ ಅನೀಸ್ ಕಣ್ಮಣಿ ಜಾಯ್ ಸಲಹೆ

7
ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಮತ್ತು ಮಾತೃವಂದನ ಸಪ್ತಾಹ ಕಾರ್ಯಕ್ರಮ

ಮಹಿಳೆಯರು ಆರೋಗ್ಯ ಸೌಲಭ್ಯ ತಪ್ಪದೇ ಪಡೆಯಲಿ: ಸಿಇಓ ಅನೀಸ್ ಕಣ್ಮಣಿ ಜಾಯ್ ಸಲಹೆ

Published:
Updated:
Deccan Herald

ತುಮಕೂರು: ಸರ್ಕಾರದಿಂದ ಉಚಿತವಾಗಿ ದೊರೆಯುವ ಎಲ್ಲ ಆರೋಗ್ಯ ಸೌಲಭ್ಯಗಳ ಪ್ರಯೋಜನವನ್ನು ಮಹಿಳೆಯರು ತಪ್ಪದೇ ಪಡೆದುಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮನವಿ ಮಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಬಾಲಭವನ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಹಾಗೂ ಮಹಿಳಾ ಸಹಕಾರ ಮಹಾ ಮಂಡಳಿ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ಧ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಮತ್ತು ಮಾತೃವಂದನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಬ್ಬರು ಆರೋಗ್ಯಯುತ ಜೀವನ ನಡೆಸಲು ಶೇ 80ರಷ್ಟು ಪೌಷ್ಟಿಕಾಂಶ ಆಹಾರ ಸೇವಿಸಬೇಕು. ರಾಗಿ ಮುದ್ದೆ, ಅನ್ನ ಊಟ ಮಾಡುವುದರಿಂದ ಮಾತ್ರ ದೇಹಕ್ಕೆ ಪೌಷ್ಟಿಕಾಂಶ ದೊರೆಯುವುದಿಲ್ಲ. ಜೊತೆಗೆ ಬೇಳೆ ಕಾಳುಗಳು, ಸೊಪ್ಪು, ಹಸಿರು ತರಕಾರಿಕ, ಮೊಟ್ಟೆ, ಹಾಲು, ಹಣ್ಣುಗಳನ್ನು ಸೇವಿಸಬೇಕು. ಖನಿಜಾಂಸ, ಜೀವ ಸತ್ವಗಳು ದೇಹಕ್ಕೆ ಲಭಿಸುತ್ತವೆ. ಇದರಿಂದ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು ಎಂದು ವಿವರಿಸಿದರು.

ಉಪನ್ಯಾಸ ನೀಡಿದ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ತಜ್ಞೆ ರಾಧಾ ಬಣಕಾರ್ ಮಾತನಾಡಿ,‘ ಕುಟುಂಬದವರ ಆರೋಗ್ಯದ ಜವಾಬ್ದಾರಿ ಮಹಿಳೆಯರ ಮೇಲಿರುವುದರಿಂದ ಸರಿಯಾದ ಆಹಾರ ಕ್ರಮದ ಬಗ್ಗೆ ಮಹಿಳೆಯರಿಗೆ ಮೊದಲು ತಿಳಿವಳಿಕೆ ಇರಬೇಕು. ನಾರಿನಾಂಶ ಹೇರಳವಾಗಿರುವ ಸಿರಿಧಾನ್ಯಗಳನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸಬೇಕು’ ಎಂದು ತಿಳಿಸಿದರು.

ಶಿಶು ಅಭಿವೃದ್ಧಿ ಅಧಿಕಾರಿ ಶ್ರೀಧರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್, ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ತಜ್ಞ ಜೆ.ಎನ್.ಪ್ರಶಾಂತ್ ಮಾತನಾಡಿದರು.

ಬಾಲಭವನ ಸದಸ್ಯ ಬಸವರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಿಕಾ, ಕೆ.ವಿ.ಕೆ ಮುಖ್ಯಸ್ಥ ಡಾ.ಲೋಗಾನಂದನ್, ಸಿಡಿಪಿಓ ಆರ್. ಸತ್ಯನಾರಾಯಣ, ಅಂಬಿಕಾ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !