ಪಾವಗಡ: ತಾಲ್ಲೂಕಿನ ಕ್ಯಾತಗಾನಚೆರ್ಲು ಗ್ರಾಮದ ಬಳಿಯ ಸೋಲಾರ್ ಪಾರ್ಕ್‌ನ ಅವಾದ್ ಪ್ಲಾಂಟ್‌ನಲ್ಲಿ ವಿದ್ಯುತ್ ತಗುಲಿ ಯುವಕ ಶುಕ್ರವಾರ ಮೃತಪಟ್ಟಿದ್ದಾರೆ.
ತಾಲ್ಲೂಕಿನ ಚಿಕ್ಕಹಳ್ಳಿ ಗ್ರಾಮದ ಗೋಪಾಲ್ (22) ಮೃತರು. ತಂತ್ರಜ್ಞನಾಗಿ ಸೋಲಾರ್ ಪ್ಲಾಂಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕೆಲಸ ಮಾಡುವಾಗ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ. ತಿರುಮಣಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.
ಕೆಲ ದಿನಗಳ ಹಿಂದೆ ಗ್ರಾಮದ ಕೆರೆ ತುಂಬಿ ಸೋಲಾರ್ ಪ್ಲಾಂಟ್ ಮುಳುಗಡೆಯಾಗಿತ್ತು. ಅಧಿಕಾರಿಗಳು ಪರಿಹಾರ ಕೊಡಿಸುವುದಾಗಿ ರೈತರ ಮನವೊಲಿಸಿ ಕೆರೆ ನೀರು ಹೊರಗೆ ಬಿಡಿಸಿದ್ದರು.