ಶಿರಾ: ಅದ್ದೂರಿ ಮದುವೆಯಾಗುವ ಬದಲು ಅದೇ ಹಣದಲ್ಲಿ ಬಡ ಕುಟುಂಬಗಳಿಗೆ ನೆರವಾಗಿ ಸರಳ ಸಾಮೂಹಿಕ ವಿವಾಹವಾಗುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಜೌಹರ್ ಗ್ರೂಪ್ ಮಾಲೀಕ ಸೈಯದ್ ಇಮ್ರಾನ್ ಹೇಳಿದರು.

ನಗರದ ಜಾಮಿಯಾ ಶಾದಿ ಮಹಲ್ನಲ್ಲಿ ಜೌಹರ್ ಗ್ರೂಪ್ನ ಅಲ್ ಹಜ್ ದಿವಂಗತ ಸೈಯದ್ ಆಸಿಂ ಸಾಹೇಬ್ ಕುಟುಂಬಸ್ಥರಾದ ಸೈಯದ್ ಇಕ್ಬಾಲ್ ಅವರ ಮಗ ಡಾ.ಸೈಯದ್ ಉಮರ್ ಮದುವೆ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವ ವಧು- ವರರಿಗೆ ಶುಭ ಕೋರಿ ಮಾತನಾಡಿದರು.

‘ಸಾಮಾಜಿಕ ಚಿಂತನೆಯೊಂದಿಗೆ ಬಡವರಿಗೆ ಆಸರೆಯಾಗಬೇಕು ಎನ್ನುವ ಉದ್ದೇಶದಿಂದ 14 ನವ ಜೋಡಿಗಳಿಗೆ ನಮ್ಮ ತಮ್ಮನ ಮದುವೆಯ ಜೊತೆಗೆ ಸಾಮೂಹಿಕವಾಗಿ ವಿವಾಹ ಮಾಡುತ್ತಿರುವುದು ಸಂತಸ ತಂದಿದೆ’ ಎಂದರು.

ಇಲ್ಲಿ ವಿವಾಹವಾದ ಜೋಡಿಗಳಿಗೆ ವಧುವಿಗೆ 3 ಗ್ರಾಂ ಚಿನ್ನದ ಓಲೆ, ವರನಿಗೆ ಬೆಳ್ಳಿ ಉಂಗುರ, ಬಟ್ಟೆ, ಬೀರು, ಮಂಚ, ಹಾಸಿಗೆ, ಮೂರು ತಿಂಗಳ ದವಸ ಧಾನ್ಯ ನೀಡಿ ಅವರ ಬದುಕು ಹಸನಾಗಲಿ ಎಂದು ಹಿರಿಯರು ಹಾರೈಸುತ್ತಿದ್ದಾರೆ ಎಂದರು.

ಜೌಹರ್ ಗ್ರೂಪ್ನ ಡಾ.ಸೈಯದ್ ಇಕ್ಬಾಲ್, ಬೇಗಂ ಮೊಹಲ್ಲಾ ಫ್ರೆಂಡ್ಸ್ ವೆಲ್ಫೇರ್ ಆರ್ಗನೈಸೇಷನ್ನ ನಾಸಿರ್ ಖಾನ್, ಆತಿಮ್ ಖಾನ್, ಕರೀಮ್ ಸಾಬ್, ಇಲಿಯಾಸ್ ಖಾನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.