ರೈಲು ಪ್ರಯಾಣಿಕರ ಮನವಿ ಮೇರೆಗೆ 2013ರ ಆ. 3ರಿಂದ ವಿಶೇಷ ರೈಲು ಸಂಚಾರ ಆರಂಭಿಸಲಾಗಿತ್ತು. ಅಂದಿನಿಂದ ಪ್ರತಿ ವರ್ಷ ರೈಲಿನ ಹುಟ್ಟು ಹಬ್ಬ ಆಚರಿಸಲಾಗುತ್ತಿದೆ. ಪ್ರಯಾಣಿಕರ ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಮತ್ತು ಪ್ರಯಾಣಿಕರು ಸಡಗರದಿಂದ ರೈಲು ಎಂಜಿನ್‌ಗೆ ಬಾಳೆ ದಿಂಡು ಕಟ್ಟಿದರು. ಹೂವು, ಬಲೂನುಗಳಿಂದ ರೈಲು ಸಿಂಗರಿಸಿದರು. ಕೇಕ್ ಕತ್ತರಿಸಿ ಸಂಭ್ರಮಿಸಿದರು. ಎಲ್ಲರಿಗೆ ಸಿಹಿ ಹಂಚಿ ಖುಷಿಪಟ್ಟರು.