ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿ: ನಿಟ್ಟೂರು ನಾಡಕಚೇರಿಗೆ ಸಚಿವ ಭೇಟಿ

Published 8 ಸೆಪ್ಟೆಂಬರ್ 2023, 14:38 IST
Last Updated 8 ಸೆಪ್ಟೆಂಬರ್ 2023, 14:38 IST
ಅಕ್ಷರ ಗಾತ್ರ

ಗುಬ್ಬಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶುಕ್ರವಾರ ತಾಲ್ಲೂಕು ಆಡಳಿತ ಸೌಧ ಹಾಗೂ ನಿಟ್ಟೂರು ನಾಡಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು.

ಅಧಿಕಾರಿಗಳ ಕರ್ತವ್ಯದ ಬಗ್ಗೆ ವಿಚಾರಿಸಿದ ಅವರು ಹೊಸ ಇ–ಆಫೀಸ್ ಯೋಜನೆಯಿಂದ ಆಗುತ್ತಿರುವ ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

ತಹಶೀಲ್ದಾರ್ ಬಿ.ಆರತಿ ‍ಪ್ರತಿಕ್ರಿಯಿಸಿ, ಇತ್ತೀಚಿಗಷ್ಟೇ ಸಿಬ್ಬಂದಿಗೆ ಇ– ಆಫೀಸ್‌ ತರಬೇತಿ ನೀಡಲಾಗಿದೆ. ದಾನಿಗಳಿಂದ ಕಂಪ್ಯೂಟರ್‌ ಪಡೆದು ಅಳವಡಿಸಲಾಗಿದೆ. ಸಿಬ್ಬಂದಿಗೆ ಲಾಗಿನ್ ನೀಡಿದ್ದು ಟಪಾಲ್‌ನಲ್ಲಿ ಸಾರ್ವಜನಿಕ ಅರ್ಜಿಗಳನ್ನು ಇ– ಆಫೀಸ್ ಮೂಲಕ ಪಡೆದು ಸಂಬಂಧಪಟ್ಟ ಅಧಿಕಾರಿಗಳ ಲಾಗಿನ್‌ಗೆ ಕಳುಹಿಸಲಾಗುತ್ತಿದೆ. ಪ್ರಾರಂಭದಲ್ಲಿ ಕೆಲಸ ವಿಳಂಬ ಎನಿಸಿದರೂ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಇದರಿಂದ ಅನುಕೂಲವಾಗುವುದು ಎಂದು ತಿಳಿಸಿದರು.

ಶಾಸಕ ಎಸ್‌.ಆರ್. ಶ್ರೀನಿವಾಸ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಕಂದಾಯ ಇಲಾಖೆ ಕಾರ್ಯದರ್ಶಿ ರಶ್ಮಿ ಮಹೇಶ್, ತಹಶೀಲ್ದಾರ್ ಬಿ. ಆರತಿ, ಗ್ರೇಡ್ 2 ತಹಶೀಲ್ದಾರ್ ಶಶಿಕಲಾ, ಹೆಚ್ಚುವರಿ ಶಿರಸ್ತೇದಾರ್ ಶ್ರೀರಂಗ, ಖಾನ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT