ಮಧುಗಿರಿ: ಆಸ್ಪತ್ರೆಗಳು ಹಣಕ್ಕಿಂತ ಬಡಜನರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಶಾಸಕ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.

ಪಟ್ಟಣದ ಗೌರಿಬಿದನೂರು ಬೈಪಾಸ್ ರಸ್ತೆ ಸಮೀಪ ಮಧುಸೂಧನ್ ಸಾಯಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರೀಸರ್ಚ್ ಕೇಂದ್ರ ಸಹಯೋಗದಲ್ಲಿ ನೂತನವಾಗಿ ಯುಎಸ್ಎ ಷಾ ಹ್ಯಾಪಿನೇಸ್ ಫೌಂಡೇಶನ್ ತುರ್ತು ನಿಗಾ ಘಟಕ ಹಾಗೂ ಸಾಯಿ ಸ್ವಾಸ್ಥ್ಯ ಕ್ಷೇಮ ಕೇಂದ್ರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮನುಷ್ಯನಿಗೆ ಕಾಯಿಲೆ ಸಹಜ. ಸಣ್ಣ ಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗಳನ್ನು ಅವಲಂಬಿಸಬೇಕಾಗುತ್ತದೆ. ಆದರೆ, ಈ ಆಸ್ಪತ್ರೆಯಲ್ಲಿ ಎಲ್ಲ ಚಿಕಿತ್ಸೆ ಉಚಿತವಾಗಿದೆ. ತಾಲ್ಲೂಕಿನ ಜನರು ಈ ಆಸ್ಪತ್ರೆಗೆ ಭೇಟಿ ನೀಡಿ ನಗದು ರಹಿತವಾಗಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ಪ್ರಾರಂಭದಲ್ಲಿಯೇ ರೋಗ ರುಜಿನ ಪತ್ತೆ ಹಚ್ಚಿ ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ ಎಂದರು.

ಮಧುಸೂಧನ್ ಸಾಯಿ, ಶಾ ಫೌಂಡೇಷನ್ ರಿಕಾ ಶಾ, ಮನು ಶಾ, ಡಾ.ಸತೀಶ್, ಅನ್ನಪೂರ್ಣ, ವ್ಯವಸ್ಥಾಪಕ ಸಾಯಿ, ಉಪವಿಭಾಗಾಧಿಕಾರಿ ಗೊಟೂರು ಶಿವಪ್ಪ, ಮಾಜಿ ಪುರಸಭಾಧ್ಯಕ್ಷ ಎಂ.ಕೆ.ನಂಜುಂಡಯ್ಯ, ಕಾಂಗ್ರೆಸ್ ಮುಖಂಡರಾದ ಎಂ.ಎಸ್.ಮಲ್ಲಿಕಾರ್ಜುನಯ್ಯ, ಎಂ.ಪಿ.ಕಾಂತರಾಜು, ಎಂ.ಜಿ.ಶ್ರೀನಿವಾಸಮೂರ್ತಿ, ಸಂದೀಪ್ ನಾರಾಯಣ್, ದೀಪಕ್, ಹರ್ಷ,ಗಂಗರಾಜು, ಗುತ್ತಿಗೆದಾರ ದ್ವಾರಕನಾಥ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.