ಶನಿವಾರ, ಜನವರಿ 29, 2022
18 °C
ತುಮಕೂರು: ವಿಧಾನ ಪರಿಷತ್‌ ಚುನಾವಣೆ

ತುಮಕೂರು: ವಿಧಾನ ಪರಿಷತ್ ಚುನಾವಣೆಯಲ್ಲಿ 3 ಪಕ್ಷಗಳಿಗೆ ಒಳ ಏಟಿನ ಚಿಂತೆ

ಕೆ.ಜೆ. ಮರಿಯಪ್ಪ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ವಿಧಾನ ಪರಿಷತ್ ಚುನಾವಣೆಯಲ್ಲಿರುವ ಘಟಾನುಘಟಿ ‘ಕೋಟಿ ಕುಳ’ಗಳಿಂದಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಪ್ರಮುಖ ಮೂರು ಪಕ್ಷಗಳಿಗೂ ಗೆಲುವು ಪ್ರತಿಷ್ಠೆಯಾಗಿದೆ.

ಕಾಂಗ್ರೆಸ್‌ನ ಆರ್.ರಾಜೇಂದ್ರ, ಬಿಜೆಪಿಯ ಎನ್.ಲೋಕೇಶ್, ಜೆಡಿಎಸ್‌ನ ಆರ್.ಅನಿಲ್ ಕುಮಾರ್ ಈ ಮೂವರು ಅಭ್ಯರ್ಥಿಗಳು ಕೋಟಿ ಕುಳಗಳು. ಇವರ ಧಾರಾಳತನದಿಂದಾಗಿ ಚುನಾವಣೆ ರಂಗೇರಿದೆ. ಮತದಾರರಲ್ಲಿ ಅಧಿಕ ಸಂಖ್ಯೆಯಲ್ಲಿರುವ ಗ್ರಾಮ ಪಂಚ್ತಾಯಿ ಸದಸ್ಯರೂ ತಕ್ಕಡಿ ಯಾವ ಕಡೆ ಹೆಚ್ಚು ‘ತೂಗುತ್ತಿದೆ’ ಎಂದು ನೋಡುತ್ತಿದ್ದಾರೆ.

ಸತತ ಎರಡು ಬಾರಿ ಗೆದ್ದಿರುವ ಜೆಡಿಎಸ್, ಕ್ಷೇತ್ರ ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ. ಹ್ಯಾಟ್ರಿಕ್ ಗೆಲುವಿಗೆ ತಡೆಯೊಡ್ಡಲು ಕಾಂಗ್ರೆಸ್, ಬಿಜೆಪಿ ಸಜ್ಜಾಗಿವೆ. ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ನಾಯಕರು ಒಟ್ಟಾಗಿ ಅಖಾಡಕ್ಕೆ ಇಳಿದಿದ್ದಾರೆ. ಬಿಜೆಪಿ ನಾಯಕ
ರು ಶತಾಯಗತಾಯ ಗೆಲ್ಲಲೇಬೇಕು ಎಂದು ಪಣತೊಟ್ಟಿದ್ದಾರೆ. ಜತೆಗೆಜಾತಿ ಲೆಕ್ಕಾಚಾರವೂ ಕೆಲಸ ಮಾಡುತ್ತಿದೆ.

ಪ್ರಮುಖವಾಗಿ ಮೂರು ಪಕ್ಷಗಳಿಗೆ ಒಳ ಏಟಿನದೇ ಚಿಂತೆ. ಯಾವ ನಾಯಕರು ಯಾವ ಸಂದರ್ಭದಲ್ಲಿ ಕೈಕೊಡುತ್ತಾರೆ ಎಂಬ ಗುಮಾನಿ ಎಲ್ಲರನ್ನೂ ಕಾಡುತ್ತಿದೆ. ಕಾಂಗ್ರೆಸ್ ನಾಯಕರು ಒಗ್ಗೂಡಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ. ಕೊನೆಯ
ವರೆಗೂ ಅದೇ ರೀತಿ ಇರುತ್ತಾರೆಯೆ? ಬಿಜೆಪಿಯಲ್ಲೂ ಭಿನ್ನಮತವಿಲ್ಲ ಎಂದು ಹೇಳಿಕೊಂಡಿದ್ದು, ಅದೇ ರೀತಿ ನಡೆದುಕೊಳ್ಳುವರೆ? ಜೆಡಿಎಸ್ ನಾಯಕರು ಮನಪೂರ್ವಕವಾಗಿ ಕೆಲಸ ಮಾಡುವರೆ? ಎಂಬ ಚರ್ಚೆ ನಡೆದಿದೆ.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ‘ಲೋಕಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣರಾದವರಿಗೆ ತಕ್ಕ ಪಾಠ ಕಲಿಸಿ’ ಎಂದು ಹೇಳುತ್ತಿದ್ದಾರೆ. ‘ನಾನೇ ಸೋಲಿಸಿದ್ದು’ ಎಂದು ಹೇಳಿಕೊಳ್ಳುತ್ತಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರ ಪುತ್ರ ಆರ್.ರಾಜೇಂದ್ರ ಅವರನ್ನು ಸೋಲಿಸುವ ಮೂಲಕ ‘ನೋವು’ ದೂರಮಾಡಿ ಎಂದು ಗೌಡರು ಮನವಿ ಮಾಡಿದ್ದಾರೆ. ಆದರೆ ಕಾಂಗ್ರೆಸ್ ನಾಯ
ಕರು ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಒಗ್ಗಟ್ಟಾಗಿ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಕೆ.ಎನ್‌.ರಾಜಣ್ಣ ಸಹ ತಮ್ಮ ಮಗನನ್ನು ಗೆಲುವಿನ ದಡ ಸೇರಿಸಲು ಮೂರು ದಶಕಗಳ ರಾಜಕೀಯ ಪಟ್ಟುಗಳನ್ನು ಬಳಸುತ್ತಿದ್ದಾರೆ.

ಇಬ್ಬರು ಸಚಿವರು ಸೇರಿ ಐವರು ಶಾಸಕರು, ತಲಾ ಇಬ್ಬರು ಸಂಸತ್‌ ಹಾಗೂ ಪರಿಷತ್ ಸದಸ್ಯರು ಇದ್ದಾರೆ. ಅಧಿಕಾರ ಬಲ ಇದೆ. ನಮ್ಮ ಬಳಿ ಎಲ್ಲಾ ರೀತಿಯ ‘ಶಕ್ತಿ’ ಇದ್ದು ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದೇವೆ. ಗೆಲ್ಲಿಸಿಕೊಳ್ಳುತ್ತೇವೆ ಎಂಬ ಆತ್ಮವಿಶ್ವಾದಲ್ಲಿ ಬಿಜೆಪಿ ನಾಯಕರಿದ್ದಾರೆ. ಜೆಡಿಯು, ಕರ್ನಾಟಕ ರಾಷ್ಟ್ರ ಸಮಿತಿ, ರೈತ ಸಂಘ ಒಟ್ಟಾಗಿ ಗಜೇಂದ್ರ ಕುಮಾರ್ ಗೌಡ ಅವರನ್ನು
ಕಣಕ್ಕಿಳಿಸಿವೆ.

ಒಟ್ಟು ಮತದಾರರು– 5,559
ಪುರುಷ– 2,623
ಮಹಿಳೆ– 2,936
ಒಟ್ಟು ಗ್ರಾ.ಪಂ 328
ಮಹಾನಗರ ಪಾಲಿಕೆ–1
ನಗರಸಭೆ– 1
ಪುರಸಭೆ– 4
ಪಟ್ಟಣ ಪಂಚಾಯಿತಿ– 4
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು