
ರೈತರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕೆಲಸ ಮಾಡಬೇಕು. ವಿದ್ಯುತ್ ತಂತಿ ಕಂಬಗಳು ಬಾಗಿರುವುದನ್ನು ಸರಿಪಡಿಸಬೇಕು ಎಂದು ಬೆಸ್ಕಾಂ ಅಧಿಕಾರಿಗಳಿಗೆ ಹಿಂದೆಯೇ ಸಭೆಯಲ್ಲಿ ಸೂಚಿಸಿದ್ದೇನೆ.
ಕೆ.ಎನ್.ರಾಜಣ್ಣ, ಸಹಕಾರ ಸಚಿವ
ವಿದ್ಯುತ್ ಪರಿವರ್ತಕಗಳಲ್ಲಿ ಗಿಡ ಮತ್ತು ಬಳ್ಳಿಗಳು ಆವರಿಸಿಕೊಂಡಿವೆ. ಬಳ್ಳಿ ಹಬ್ಬುವ ಮುನ್ನವೇ ಸ್ವಚ್ಛ ಮಾಡಬೇಕು. ವಿದ್ಯುತ್ ಪರಿವರ್ತಕ ಸುತ್ತಲೂ ಸುರಕ್ಷಿತ ಬೇಲಿ ನಿರ್ಮಿಸಬೇಕು.
ಗೋವಿಂದರಾಜು, ಗಂಜಲುಗುಂಟೆ
ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ತಂತಿ ಹಾಗೂ ಕಂಬಗಳಿಗೆ ಮರ ಗಿಡದ ಕೊಂಬೆ ತಾಗಿ ಬೆಂಕಿ ಕಿಡಿ ಕಾಣಿಸಿಕೊಳ್ಳುತ್ತಿವೆ. ರಸ್ತೆ ಬದಿಯಲ್ಲಿ ಓಡಾಡುವುದಕ್ಕೂ ಭಯವಾಗುತ್ತಿದೆ. ಅಧಿಕಾರಿಗಳು ಆಗಾಗ್ಗೆ ತೆರವುಮಾಡಬೇಕು.
ವೆಂಕಟೇಶ್ ಬ್ರಹ್ಮದೇವರಹಳ್ಳಿ 
ರೈತರ ಜಮೀನುಗಳಲ್ಲಿ ಬಾಗಿರುವ ವಿದ್ಯುತ್ ಕಂಬಗಳನ್ನು ಸರಿಪಡಿಸಬೇಕು. ಅನಾಹುತ ಸಂಭವಿಸುವ ಮನ್ನ ಅಧಿಕಾರಿಗಳು ಗಮನ ನೀಡಬೇಕು. ಇಲ್ಲವಾದರೆ ಅದೆಷ್ಟೊ ಜೀವಗಳು ಕಳೆದುಕೊಳ್ಳಬೇಕಾಗುತ್ತದೆ. ಜನಪ್ರತಿನಿಧಿಗಳು ಗಮನಹರಿಸಬೇಕು.
ಕೆಂಪಣ್ಣ ಪುರವರಮಧುಗಿರಿ ಗೌರಿಬಿದನೂರು ರಸ್ತೆಯಲ್ಲಿರುವ ವಿದ್ಯುತ್ ಪರಿವರ್ತಕಕ್ಕೆ ಗಿಡ ಬಳ್ಳಿ ಹಬ್ಬಿದೆ
ಮಧುಗಿರಿ ತಾಲ್ಲೂಕಿನ ಗಂಜಲುಗುಂಟೆ ಸಮೀಪ ವಿದ್ಯುತ್ ಕಂಬಕ್ಕೆ ಹಬ್ಬಿದ ಬಳ್ಳಿ
ಮಧುಗಿರಿ ತಾಲ್ಲೂಕಿನ ಪುರವರ ಗ್ರಾಮದ ರೈತರ ಜಮೀನಿನಲ್ಲಿ ಮಳೆ ಮತ್ತು ಗಾಳಿಗೆ ವಿದ್ಯುತ್ ಕಂಬ ಸಂಪೂರ್ಣವಾಗಿ ಬಾಗಿರುವುದು
ಸಿದ್ದಾಪುರ ಗೊಲ್ಲರಹಟ್ಟಿಯ ಸರ್ಕಾರಿ ಶಾಲೆ ಆವರಣದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿ
ಮಧುಗಿರಿ ಚೌಡೇಶ್ವರಿ ರಸ್ತೆಯಲ್ಲಿರುವ ವಿದ್ಯುತ್ ಪರಿವರ್ತಕದಲ್ಲಿ ಬೆಂಕಿ