ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಟಗೆರೆ | ಆಕಸ್ಮಿಕ ಬೆಂಕಿ: 9 ಗುಡಿಸಲು ಭಸ್ಮ

Published 26 ಏಪ್ರಿಲ್ 2024, 14:15 IST
Last Updated 26 ಏಪ್ರಿಲ್ 2024, 14:15 IST
ಅಕ್ಷರ ಗಾತ್ರ

ಕೊರಟಗೆರೆ: ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಂಪುಗಾನಹಳ್ಳಿಯಲ್ಲಿ ಶುಕ್ರವಾರ ಆಕಸ್ಮಿಕ ಬೆಂಕಿ ತಗುಲಿ 9 ಗುಡಿಸಲುಗಳು ಭಸ್ಮವಾಗಿದೆ.

10 ಹಂದಿ ಜೋಗಿ ಕುಟುಂಬಗಳು ಸೂರು ಕಳೆದುಕೊಂಡಿವೆ.

ಗುಡಿಸಲಲ್ಲಿ ಕಟ್ಟಿದ್ದ ಐದು ಕುರಿ ಮರಿಗಳು ಸುಟ್ಟು ಕರಕಲಾಗಿವೆ. ಹತ್ತಕ್ಕೂ ಹೆಚ್ಚು ಮೇಕೆಗಳು ಗಾಯಗೊಂಡಿವೆ. ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದರು. ಗುಡಿಸಲಲ್ಲಿದ್ದ ಐದು ಮನೆ ಬಳಕೆ ಗ್ಯಾಸ್ ಸಿಲಿಂಡರ್ ಸ್ಫೋಟವಾಗದೆ ಇದ್ದಿದ್ದರಿಂದ ಭಾರಿ ಅನಾಹುತ ತಪ್ಪಿದೆ.

ಗುಡಿಸಲು ವಾಸಿಗಳು ಮತದಾನಕ್ಕೆಂದು ಮತಗಟ್ಟೆಗೆ ತೆರಳಿದ್ದಾಗ ಬೆಂಕಿ ಬಿದ್ದಿದೆ. ಗುಡಿಸಲಲ್ಲಿ ಇಟ್ಟಿದ್ದ ದವಸ ಧಾನ್ಯ ಸೇರಿದಂತೆ ದಿನ ಬಳಕೆ ವಸ್ತುಗಳು ಸುಟ್ಟು, ನಷ್ಟ ಉಂಟಾಗಿದೆ.

ಚಿಂಪುಗಾನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಗುಡಿಸಲುಗಳಲ್ಲಿ ಪದೇ ಪದೇ ಬೆಂಕಿ ಅವಘಡ ನಡೆಯುತ್ತಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ನಿವೇಶನ ಹಂಚಿಕೆ ಮಾಡಿ, ಮನೆ ಕಟ್ಟಿಸಿ ಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT