ಸೋಮವಾರ, ಮೇ 23, 2022
27 °C

ತುಮಕೂರು | ಕರಿಯಮ್ಮದೇವಿ ವಿಮಾನ ಗೋಪುರ ಕಳಶ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಗಲವಾಡಿ: ನಿಟ್ಟೂರು ಹೋಬಳಿಯ ತ್ಯಾಗಟೂರು ಗ್ರಾಮದೇವತೆ ಕರಿಯಮ್ಮ ದೇವಿಯ ವಿಮಾನ ಗೋಪುರ ಬ್ರಹ್ಮಕಲಶ, ಕುಂಭಾಭಿಷೇಕ ಮಹೋತ್ಸವವು ಮೇ 12 ಮತ್ತು 13ರ ವರೆಗೆ ನಡೆಯಲಿದೆ.

ಮೇ 12ರಂದು ಸಂಜೆ ತ್ಯಾಗಟೂರು ಅರ್ಕೇಶ್ವರ ಸ್ವಾಮಿ, ಮೂಗನಾಯಕನ ಕೋಟೆ ಕೊಲ್ಲಾಪುರದಮ್ಮ ದೇವಿ, ಸಾಗಸಂದ್ರ ಕೆಂಪಮ್ಮ ದೇವಿ, ಕೆಸ್ತೂರಿನ ಅಹೋಬಲ ಲಕ್ಷ್ಮಿನರಸಿಂಹಸ್ವಾಮಿ, ಕೋಡಿನಾಗೇನಹಳ್ಳಿ ರಂಗನಾಥಸ್ವಾಮಿ, ನಿಟ್ಟೂರಿನ ಶಿವಭಕ್ತ ಬೇಡರ ಕಣ್ಣಪ್ಪಸ್ವಾಮಿ ದೇವರ ಆಗಮನವಿದೆ. ಕುಂಭಗಳ ಮೆರವಣಿಗೆ, ಗಣಪತಿ ಪೂಜೆ, ಗಂಗಾಪೂಜೆಯೊಂದಿಗೆ ಕರಿಯಮ್ಮ ದೇವಿಯ ಕಳಸ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ರಾತ್ರಿ ದೇವರ ಉತ್ಸವ ನಡೆಯಲಿದೆ. ಭಕ್ತಾದಿಗಳಿಗೆ ಮಹಾ ದಾಸೋಹ ಏರ್ಪಡಿಸಲಾಗಿದೆ.

ಮೇ 13ರಂದು ಶುಕ್ರವಾರ ಬೆಳಿಗ್ಗೆ ಗೋಪೂಜೆ ಮಹಾಗಣಪತಿ ಹೋಮ, ನವಗ್ರಹ ಹೋಮ, ಪೂರ್ಣಾಹುತಿ, ಬೆಳಿಗ್ಗೆ 10ಗಂಟೆಗೆ ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ ಅವರ ಅಮೃತ ಹಸ್ತದಿಂದ ಬ್ರಹ್ಮ ಕಲಶ, ಕುಂಭಾಭಿಷೇಕ ಮಹೋತ್ಸವವಿದೆ.

ಮಧ್ಯಾಹ್ನ ಧಾರ್ಮಿಕ ಸಮಾರಂಭ ನಡೆಯಲಿದೆ. ರಾಜನಹಳ್ಳಿ ಮಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಶಿಡ್ಲೆಕೋಣ ಮಠದ ಸಂಜಯಕುಮಾರ ಸ್ವಾಮೀಜಿ, ಬೆಟ್ಟದಹಳ್ಳಿ ಗವಿಮಠದ ಅಧ್ಯಕ್ಷ ಚಂದ್ರಶೇಖರ ಸ್ವಾಮೀಜಿ ನೇತೃತ್ವವಹಿಸಲಿದ್ದಾರೆ. ಮಾಜಿ ಶಾಸಕ ಕೆ.ಎನ್. ರಾಜಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಸಂಸದ ಜಿ.ಎಸ್. ಬಸವರಾಜು ಅಧ್ಯಕ್ಷತೆವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಎಸ್.ಆರ್. ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಭಾಗವಹಿಸಲಿದ್ದಾರೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಟಿ.ಎನ್. ನರಸಿಂಹಮೂರ್ತಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.