ಶನಿವಾರ, ಅಕ್ಟೋಬರ್ 16, 2021
23 °C

ಜವಳಿ ಪಾರ್ಕ್‌ ಬೇಡ: ರೈತರ ಅಳಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೋವಿನಕೆರೆ: ‘ಶತಮಾನಗಳಿಂದ ವ್ಯವಸಾಯ, ಕುರಿ, ಮೇಕೆ ಮತ್ತು ಹೈನುಗಾರಿಕೆ ಮಾಡಿಕೊಂಡು ಜೀವಿಸುತ್ತಿದ್ದೇವೆ. ಜವಳಿ ಪಾರ್ಕ್‌ಗಾಗಿ ಸಾವಿರಾರು ಎಕರೆ ಜಮೀನು ವಶಕ್ಕೆ ಪಡೆಯಲು ಸರ್ಕಾರ ಯೋಜನೆ ಹಾಕಿದೆ. ಈ ಸಂಕಷ್ಟದಿಂದ ರೈತರನ್ನು ಉಳಿಸಬೇಕು’ ಎಂದು ಚಿಕ್ಕರಸನಹಳ್ಳಿಯ 70 ವರ್ಷದ ಜಯಮ್ಮ ಕಣ್ಣೀರು ಹಾಕಿ ಶಾಸಕ ಜಿ. ಪರಮೇಶ್ವರ್ ಅವರಿಗೆ ಮನವಿ ಮಾಡಿದರು.

ತೋವಿನಕೆರೆ ಪಂಚಾಯಿತಿ ವ್ಯಾಪ್ತಿಯ ಓಬನಹಳ್ಳಿ ಗ್ರಾಮದಲ್ಲಿ ಸೋಮವಾರ ₹50 ಲಕ್ಷ ವೆಚ್ಚದಲ್ಲಿ ಚೆಕ್‌ಡ್ಯಾಂ ನಿರ್ಮಾಣಕ್ಕೆ ಶಾಸಕರು ಭೂಮಿಪೂಜೆ ಮಾಡಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ರೈತರು ಶಾಸಕರಿಗೆ ಜವಳಿ ಪಾರ್ಕ್‌ ಬೇಡವೇ ಬೇಡ ಎಂದು
ಒತ್ತಾಯಿಸಿದರು.

ನೂರಾರು ಕುಟುಂಬಗಳಿಗೆ ಎರಡು ಎಕರೆಗಿಂತ ಹೆಚ್ಚು ಜಮೀನು ಇಲ್ಲ. ಸರ್ಕಾರ ಜಮೀನು ವಶಪಡಿಸಿಕೊಂಡರೆ ಬೇರೆ ಜಮೀನು ಖರೀದಿ ಮಾಡುವ ಶಕ್ತಿ ಇಲ್ಲ. 200 ಕುಟುಂಬಗಳು ಬಗರ್ ಹುಕುಂಗೆ ಮನವಿ ಸಲ್ಲಿಸಿದ್ದಾರೆ. ಜವಳಿ ಪಾರ್ಕ್‌ ನಿರ್ಮಾಣವಾದರೆ ಸಾವಿರಾರು ಕುಟುಂಬಗಳು ಬೀದಿ ಪಾಲಾಗುತ್ತವೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶ್ರೀಧರ ತಿಳಿಸಿದರು.

ತೋವಿನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಚ್.ಜೆ.ಲಕ್ಷ್ಮಮ್ಮ, ಸದಸ್ಯೆ ನರಸಮ್ಮ, ಗಂಗಾಣಿ, ಜಾಟಣ್ಣ ಪ್ರಸನ್ನ, ಉಮೇಶ್ ತಿಮ್ಮರಾಜು, ಮುಖಂಡರಾದ ಟಿ.ಡಿ.ಪ್ರಸನ್ನಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರಕೆರೆ ಶಂಕರಣ್ಣ, ಅಶ್ವತ್ ಕುರಿಹಳ್ಳಿ ರಮೇಶ್, ಅಜ್ಜೇನಹಳ್ಳಿ ಶಿವಣ್ಣ, ಓಬನಹಳ್ಳಿ ಈಶ್ವರಯ್ಯ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.