ಬುಧವಾರ, ಅಕ್ಟೋಬರ್ 21, 2020
23 °C
ತುಮಕೂರು ವಿಶ್ವವಿದ್ಯಾಲಯ; ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ

ಆನ್‌ಲೈನ್ ತರಗತಿ; ಶೇ 92ರಷ್ಟು ಹಾಜರಾತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ತುಮಕೂರು ವಿಶ್ವವಿದ್ಯಾಲಯದಿಂದ ನಡೆಯುತ್ತಿರುವ ಆನ್‌ಲೈನ್ ತರಗತಿಗಳಿಗೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಸೆ.1ರಿಂದ ಆರಂಭವಾಗಿರುವ ತರಗತಿಗಳಿಗೆ ಶೇ 92ರಷ್ಟು ಹಾಜರಾತಿ ಇದೆ. ರಾಜ್ಯದ ಉಳಿದ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ ಇದು ಅತ್ಯುತ್ತಮ ಹಾಜರಾತಿ ಎನಿಸಿದೆ ಎನ್ನುತ್ತವೆ ವಿಶ್ವವಿದ್ಯಾಲಯದ ಮೂಲಗಳು.

ಗೂಗಲ್ ಮೀಟ್ ಮತ್ತು ಜ್ಯೂಮ್ ಆ್ಯಪ್‌ ಮೂಲಕ ತರಗತಿಗಳನ್ನು ನಡೆಸಲಾಗುತ್ತಿದೆ. ಒಂದು ತರಗತಿ 45 ನಿಮಿಷಗಳ ಕಾಲ ನಡೆಯುತ್ತಿದ್ದು ಪ್ರತಿ ತರಗತಿಗಳ ನಡುವೆ 15 ನಿಮಿಷ ಬಿಡುವು ಕೊಡಲಾಗುತ್ತಿದೆ.

ಆನ್‌ಲೈನ್ ತರಗತಿಗಳಲ್ಲಿ ವಿದ್ಯಾರ್ಥಿಗಳು ಸುಲಭವಾಗಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಲಿಂಕ್ ಮತ್ತು ವಿಷಯಾವಾರು ನೋಟ್ಸ್‌ಗಳನ್ನು ಪ್ರಕಟಿಸಲಾಗಿದೆ. ವಿಷಯಾವಾರು ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ರಚಿಸಿಕೊಳ್ಳಲಾಗಿದೆ. ಇಲ್ಲಿಗೆ ಲಿಂಕ್‌ಗಳನ್ನು ಸಹ ಹಾಕಲಾಗುತ್ತಿದೆ.

ಸ್ನಾತಕೋತ್ತರ ಪದವಿಯ ಒಂದು ವಿಭಾಗದಿಂದ ಪ್ರತಿ ದಿನ ಕನಿಷ್ಠ ನಾಲ್ಕು ತರಗತಿಗಳು ನಡೆಯುತ್ತಿವೆ. ಪ್ರತಿ ದಿನವೂ ಪಾಠ, ಪ್ರವಚನಕ್ಕೆ ಸಂಬಂಧಿಸಿದಂತೆ ವಿಡಿಯೊಗಳು ಅಪ್‌ಲೋಡ್ ಆಗುತ್ತಿವೆ. ಹೀಗೆ ಆನ್‌ಲೈನ್ ತರಗತಿಗಳನ್ನು ವಿಶ್ವವಿದ್ಯಾಲಯದಲ್ಲಿ ಪರಿಣಾಮ ಕಾರಿಯಾಗಿ ಜಾರಿಗೊಳಿಸಲಾಗಿದೆ.

ಸಿಗ್ನಲ್ ಸಮಸ್ಯೆ ಕಾರಣದಿಂದ ಗೂಗಲ್ ಮೀಟ್ ಅಥವಾ ಜ್ಯೂಮ್ ಆ್ಯಪ್ ಮೂಲಕ ತರಗತಿಗಳಿಗೆ ಪಾಲ್ಗೊಳ್ಳಲು ಸಾಧ್ಯವಾಗದಿದ್ದವರಿಗೆ ಅನುಕೂಲವಾಗಲಿ ಎಂದು ವಾಟ್ಸ್ಆ್ಯಪ್ ಗ್ರೂಪ್‌ಗಳಿಗೂ ವಿಡಿಯೊಗಳನ್ನು ಹಾಕಲಾಗುತ್ತಿದೆ. ವಿ.ವಿಯ ವೆಬ್‌ಸೈಟ್‌ನಲ್ಲಿಯೇ ನೋಟ್ಸ್‌ಗಳು ದೊರೆಯುತ್ತಿರುವುದು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.