ಶನಿವಾರ, ಜೂಲೈ 4, 2020
22 °C

ಆಸ್ಪತ್ರೆಗೆ ಮನೆಯಿಂದಲೇ ಫ್ಯಾನ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾವಗಡ: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಒಳರೋಗಿಗಳಾಗಿ ದಾಖಲಾಗುವವರೇ ಮನೆಯಿಂದ ಫ್ಯಾನ್ ತರಬೇಕಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಸೆಕೆ, ಸೊಳ್ಳೆ ಗಳ ಕಾಟ ತಾಳಲಾಗದೆ ಆಸ್ಪತ್ರೆ ಯಿಂದ ಬಿಡುಗಡೆ ಆಗುವವರೆಗೆ ರೋಗಿಗಳು ಫ್ಯಾನ್ ತಂದಿಟ್ಟುಕೊಳ್ಳುತ್ತಿದ್ದಾರೆ.

ಅದರಲ್ಲೂ ಬಾಣಂತಿಯರು, ಹಸುಗೂಸುಗಳಿಗೆ ಇದು ಅನಿವಾರ್ಯ ವಾಗಿದೆ. ಹಲ ದಿನಗಳಿಂದ ಆಸ್ಪತ್ರೆ ವಾರ್ಡ್‌ಗಳಲ್ಲಿ ಫ್ಯಾನ್‌ಗಳು ಕೆಟ್ಟಿವೆ. ಇಲ್ಲಿನ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ರೋಗಿಗಳಿಗೆ ಸಮಸ್ಯೆಯಾಗಿದೆ.

‘ಉಳ್ಳವರು ಮನೆಯಿಂದ; ಇಲ್ಲವೆ ಖರೀದಿಸಿ ಫ್ಯಾನ್‌ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಬಡವರು ಸೆಕೆ ಯಲ್ಲೇ ಕಾಲ ಕಳೆಯಬೇಕು. ಕೂಡಲೇ ಫ್ಯಾನ್‌ ದುರಸ್ತಿ ಮಾಡಿಸ ಬೇಕು’ ಎಂದು ರೋಗಿಗಳು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.