
ಡಾಂಬರ್ ಸಂಪೂರ್ಣ ಕಿತ್ತು ಹೋದ ಹಿನ್ನಲೆ ಮಣ್ಣಿನ ರಸ್ತೆಯಾಗಿ ಮುಖ್ಯ ರಸ್ತೆ ಮಾರ್ಪಟ್ಟಿದೆ. ಎರಡರಿಂದ ಮೂರು ಬಾರಿ ಗ್ರಾಮಸ್ಥರು ಮಣ್ಣು ಹೊಡೆಸಿ ದುರಸ್ತಿ ಮಾಡಿಸಿಕೊಂಡಿದ್ದೇವೆ. ಸರಿಪಡಿಸುವಂತೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಆರ್.ಎನ್. ನರಸಿಂಹನಾಯಕ, ರಂಗಸಮುದ್ರ ಗ್ರಾ.ಪಂ. ಸದಸ್ಯ
ದೂಳಿನಿಂದಾಗಿ ಬಸ್‌ಗಾಗಿ ಕಾಯಲೂ ಸಾಧ್ಯವಾಗುತ್ತಿಲ್ಲ. ರಸ್ತೆ ಪಕ್ಕದ ಮನೆ ಮಳಿಗೆಯವರು ಆಸ್ಪತ್ರೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಚಿತ್ರದುರ್ಗ ಮುಖ್ಯ ರಸ್ತೆ ಹಾಳಾಗಿ ವರ್ಷಗಳೇ ಕಳೆದರೂ ಸರಿಪಡಿಸುವ ಗೋಜಿಗೆ ಹೋಗಿಲ್ಲ.
ಆರ್.ಎನ್. ರಾಜೇಶ್, ರಂಗಸಮುದ್ರ
ಹಾಳಾದ ರಸ್ತೆಯಿಂದ ಜನ ಜೀವನ ಅಸ್ತವ್ಯಸ್ತವಾಗುತ್ತದೆ. ಕೆಲ ನಿಮಿಷಗಳು ತೆಗೆದುಕೊಳ್ಳುವ ಪ್ರಯಾಣ ಗಂಟೆ ತೆಗೆದುಕೊಳ್ಳುತ್ತದೆ. ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು ಅಧಿಕಾರಿಗಳು ಆದ್ಯತೆ ನೀಡಬೇಕು.
ಎಸ್.ಪಿ. ಅನಿಲ್ ಕುಮಾರ್, ಶ್ರೀರಂಗಪುರ
ಪ್ರಮುಖ ರಸ್ತೆಗಳೇ ಹಾಳಾಗಿವೆ. ದಶಕಗಳು ಕಳೆದರೂ ಉತ್ತಮ ರಸ್ತೆ ನಿರ್ಮಾಣ ಸಾಧ್ಯವಾಗದೆ ಜನತೆ ಸದಾ ಹಾಳಾದ ರಸ್ತೆಯಲ್ಲಿಯೇ ಮೈಕೈ ನೋಯಿಸಿಕೊಂಡು ಓಡಾಡಬೇಕಿದೆ. ರಸ್ತೆ ತೆರಿಗೆ ಪಾವತಿಸಿಯೂ ವಾಹನ ರಿಪೇರಿಗೆ ಸಾವಿರಾರು ರೂಪಾಯಿ ವ್ಯಯಿಸಬೇಕಾಗಿದೆ.
ಪವನ್ ಕುಮಾರ್, ಪಾವಗಡಶ್ರೀರಂಗಪುರ ಗ್ಯಾದಿಗುಂಟೆ ಪೆಂಡ್ಲಿಜೀವಿ ಗ್ರಾಮಗಳ ರಸ್ತೆ
ಪಾವಗಡ ಪಟ್ಟಣದ ಟೀಚರ್ಸ್ ಕಾಲೊನಿ ರಸ್ತೆ
ವೆಂಕಟಾಪುರ– ಹಿಂದೂಪುರ ರಸ್ತೆ
ರಂಗಸಮುದ್ರ ಬಳಿ ಚಿತ್ರದುರ್ಗ ಮುಖ್ಯರಸ್ತೆಗ ಜಲ್ಲಿ ಹಾಕಿ ಗ್ರಾಮಸ್ಥರೇ ಗುಂಡಿಗಳನ್ನು ಮುಚ್ಚಿಸಿದರು
ನಿಡಗಲ್- ಎಸ್.ಆರ್. ಪಾಳ್ಯ ರಸ್ತೆ