ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೊಯ್ಸಳ ಹಬ್ಬ’ ಆಯೋಜನೆ

ಎಲ್ಲಾ ಕ್ಷೇತ್ರದಲ್ಲೂ ಸಮುದಾಯದ ಪಾತ್ರ ಹಿರಿದು: ಶ್ಲಾಘನೆ
Last Updated 27 ಡಿಸೆಂಬರ್ 2022, 5:57 IST
ಅಕ್ಷರ ಗಾತ್ರ

ತುಮಕೂರು: ವಿಜ್ಞಾನ–ತಂತ್ರಜ್ಞಾನ, ಸಾಹಿತ್ಯ, ಧಾರ್ಮಿಕ, ಆಧ್ಯಾತ್ಮಿಕ, ಸಂಗೀತ, ಕಲೆ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಹೊಯ್ಸಳ ಸಮುದಾಯದವರು ಮುಂಚೂಣಿಯಲ್ಲಿದ್ದಾರೆ ಎಂದು ಇಸ್ರೋ ವಿದ್ಯುತ್‍ಕೋಶ ವಿಭಾಗದ ಮುಖ್ಯಸ್ಥ ಎಸ್.ಆನಂದ್‌ ಹೇಳಿದರು.

ನಗರದಲ್ಲಿ ಭಾನುವಾರ ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದಿಂದ ಹಮ್ಮಿಕೊಂಡಿದ್ದ ‘ಹೊಯ್ಸಳ ಹಬ್ಬ’ ಮತ್ತು ಸಮಾವೇಶದಲ್ಲಿ ಮಾತನಾಡಿದರು.

ಹೊಯ್ಸಳ ಕರ್ನಾಟಕ ಪಂಗಡವು ಅತ್ಯಂತ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹೊಂದಿದೆ. ಎಲ್ಲ ಕ್ಷೇತ್ರಗಳಲ್ಲೂ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸುತ್ತಿದೆ. ಹೊಯ್ಸಳ ಸಮುದಾಯದವರು ಇಂದು ಎಲ್ಲಾ ಕಡೆಗಳಲ್ಲಿಯೂ ಇದ್ದಾರೆ ಎಂದರು.

ಕನ್ನಡಪರ ಹೋರಾಟಗಾರ ರಾ.ನಂ.ಚಂದ್ರಶೇಖರ್, ‘ಹೊಯ್ಸಳ ಕರ್ನಾಟಕದ ಪರಂಪರೆ ಬಹಳ ವಿಸ್ತಾರವಾಗಿದೆ. ಒಂದು ಸಾಮ್ರಾಜ್ಯದ ಹೆಸರನ್ನೇ ತಮ್ಮ ಪಂಗಡದ ಹೆಸರಾಗಿಸಿಕೊಂಡಿದೆ’ ಎಂದು ಹೇಳಿದರು.

ನೃತ್ಯ ಕಲಾವಿದೆ ವಿದ್ಯಾ ರವಿಶಂಕರ್‌, ‘ಪೋಷಕರು ನಮ್ಮ ಶ್ರೀಮಂತ ಸಂಸ್ಕೃತಿ, ಇತಿಹಾಸದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಬೇಕು. ಧರಿಸುವ ಉಡುಪು, ನಡೆ-ನುಡಿಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು’ ಎಂದು ಸಲಹೆ ಮಾಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಪ್ರಭಾಕರ್, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಹಿರಿಯಣ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಜಿ.ಚಂದ್ರಶೇಖರ್, ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎನ್.ಚಂದ್ರಶೇಖರ್, ಪಾಲಿಕೆಯ ಸದಸ್ಯ ಸಿ.ಎನ್.ರಮೇಶ್‌, ಸಮುದಾಯದ ಮುಖಂಡರಾದ ರಮ್ಯಾ ಸುಮಂತ್‌, ಹೆಬ್ಬೂರು ಸತ್ಯನಾರಾಯಣ್‌, ಎಚ್.ರಾಮಮೂರ್ತಿ, ವಿಶ್ವಾಸ್‍, ರಮೇಶ್‌,ರಮ್ಯಾ ಅವಿನಾಶ್, ಎನ್.ಶ್ರೀರಕ್ಷಾ, ಜಿ.ಪ್ರಾಣೇಶ್, ಎಸ್.ಶ್ರೀಧರ್‌, ಹರೀಶ್‍ ಹಿರಿಯಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT