ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳಿಗೆ ಸ್ಥಳಾಂತರಕ್ಕೆ ವಿರೋಧ: ಸಂಚಾರಕ್ಕೆ ತಡೆ

ಮಳಿಗೆ ಸ್ಥಳಾಂತರಕ್ಕೆ ವಿರೋಧ: ಸಂಚಾರಕ್ಕೆ ತಡೆ– ಅಧಿಕಾರಿಗಳ ಸ್ಪಷ್ಟನೆ
Last Updated 4 ಆಗಸ್ಟ್ 2021, 3:56 IST
ಅಕ್ಷರ ಗಾತ್ರ

ಪಾವಗಡ: ಪಟ್ಟಣದ ಶಿರಾ ರಸ್ತೆ ಬದಿ ತರಕಾರಿ ಮಾರಾಟ ಮಾಡುತ್ತಿದ್ದವರನ್ನು ಬೇರೆಡೆ ಸ್ಥಳಾಂತರಿಸಲು ಪುರಸಭೆ ಅಧಿಕಾರಿಗಳು ಯತ್ನಿಸಿದಾಗ ವ್ಯಾಪಾರಿಗಳು, ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ವ್ಯಾಪಾರಿಗಳು ತರಕಾರಿಯನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ಬದಿಯ ತರಕಾರಿ ಅಂಗಡಿಗಳನ್ನುಶಿರಾ ರಸ್ತೆಯಲ್ಲಿನ ಹಳೆ ಸಂತೆ ಮಾರುಕಟ್ಟೆಗೆ ಸ್ಥಳಾಂತರಿಸುವಂತೆ ಹಲವು ಬಾರಿ ತಿಳಿಸಲಾಗಿದೆ. ರಸ್ತೆ ಬದಿ ತರಕಾರಿ ಅಂಗಡಿ ಇಡುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ಮಳಿಗೆ
ಗಳ ಮುಂದೆಯೇ ತರಕಾರಿ ಮಾರಾಟ ಮಾಡುವುದರಿಂದ ಅಂಗಡಿಗೆ ಬಂದು ಹೋಗುವವರಿಗೂ ಕಿರಿ ಕಿರಿಯಾಗುತ್ತದೆ. ಈ ನಿಟ್ಟಿನಲ್ಲಿ ರಸ್ತೆ ಬದಿಯಿಂದ ಹಳೆ ಸಂತೆ ಮಾರುಕಟ್ಟೆಗೆ ಸ್ಥಳಾಂತರಿಸಲು ತಿಳಿಸಲಾಗುತ್ತಿದೆ ಎಂದು ಪುರಸಭೆ ಅಧಿಕಾರಿಗಳು ಹೇಳಿದರು.

ಸಾವಿರಾರು ರೂಪಾಯಿ ಬಂಡವಾಳ ಹಾಕಿ ರಸ್ತೆ ಬದಿ ತರಕಾರಿ ವ್ಯಾಪಾರ ಮಾಡುತ್ತಿದ್ದೇವೆ. ಮಧ್ಯಾಹ್ನ ಏಕಾಏಕಿ ಬಂದು ಅಂಗಡಿ ಸ್ಥಳಾಂತರ ಮಾಡಿ ಎಂದರೆ ಕ್ವಿಂಟಲ್‌ಗಟ್ಟಲೆ ತರಕಾರಿಯನ್ನು ಹೇಗೆ ಬೇರೆಡೆ ಸ್ಥಳಾಂತರಿಸಬೇಕು. ಪುರಸಭೆ ಸಿಬ್ಬಂದಿ ತರಕಾರಿಯನ್ನು ಬಲವಂತವಾಗಿ ಚೀಲಕ್ಕೆ ತುಂಬುತ್ತಿದ್ದರಿಂದ ಬೇಸತ್ತು ರಸ್ತೆಗೆ ಸುರಿದಿದ್ದೇವೆ. ಈಗಾಗಲೇ ಲಾಕ್‌ಡೌನ್‌ನಿಂದ ನೊಂದಿದ್ದೇವೆ ಎಂದು ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಹಳೆ ಸಂತೆ ಮಾರುಕಟ್ಟೆ ಹಂದಿ
ಗಳ ಆವಾಸ ಸ್ಥಾನವಾಗಿದೆ. ಅದನ್ನು
ಶೌಚಾಲಯವಾಗಿ ಬಳಸಿಕೊಳ್ಳ
ಲಾಗುತ್ತಿದೆ. ಮಳೆ ನೀರು ನಿಂತು ಕೆಸರಿನ ಹೊಂಡದಂತಿದೆ. ಸುತ್ತ ಮುತ್ತಲ ಪ್ರದೇಶದವರು ಇದೇ ಸ್ಥಳದಲ್ಲಿ ಕಸ ಹಾಕಿ ವಾಸನೆ ಬರುತ್ತಿದೆ. ಸ್ವಚ್ಛಗೊಳಿ
ಸದೆ ಕೊಳಚೆ ಪ್ರದೇಶಕ್ಕೆ ಅಂಗಡಿ ಸ್ಥಳಾಂ
ತರ ಮಾಡುವಂತೆ ತಿಳಿಸುತ್ತಿರು
ವುದು ಅಮಾನವೀಯ. ಇಂತಹ
ಸ್ಥಳಕ್ಕೆ ತರಕಾರಿ ಖರೀದಿಗೆ ಯಾರೊ
ಬ್ಬರು ಬರುವುದಿಲ್ಲ ಎಂದು
ವ್ಯಾಪಾರಿಗಳು ಸಮಸ್ಯೆ ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT