ಮಂಗಳವಾರ, ಜುಲೈ 27, 2021
20 °C
ವಿಶ್ವಕರ್ಮ ಸಮುದಾಯದಿಂದ ಪ್ರತಿಭಟನೆ

ಸಮಾಧಿ ಕಿತ್ತು ಹಾಕಿ ರಸ್ತೆ ನಿರ್ಮಾಣ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಧುಗಿರಿ: ತಾಲ್ಲೂಕು ಕಾರಮರಡಿ ಗ್ರಾಮದ ವಿಶ್ವಕರ್ಮ ರುದ್ರಭೂಮಿಯ ಸಮಾಧಿಗಳನ್ನು ಹಿಟಾಚಿ ಯಂತ್ರದ ಮೂಲಕ ಕಿತ್ತು ಹಾಕಿ ರಸ್ತೆ ನಿರ್ಮಾಣ ಮಾಡಿಕೊಂಡಿರುವುದನ್ನು ಖಂಡಿಸಿ ಸಮುದಾಯದ ಮುಖಂಡರು ಶುಕ್ರವಾರ ರುದ್ರಭೂಮಿಯಲ್ಲಿ ಪ್ರತಿಭಟಿಸಿದರು.

ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣಕ್ಕಾಗಿ ಗುತ್ತಿಗೆದಾರರು ಸಮಾಧಿಗಳನ್ನು ಕಿತ್ತು ಹಾಕಿ ರಸ್ತೆ ಮಾಡಿಕೊಂಡಿದ್ದಾರೆ.

ತಾಲ್ಲೂಕು ಕಸಬಾ ವ್ಯಾಪ್ತಿಯ ಕಾರಮರಡಿ ಗ್ರಾಮದ ಸರ್ವೆ ನಂ. 75ರಲ್ಲಿ ಸಾರ್ವಜನಿಕ ರುದ್ರಭೂಮಿಗೆ ಈ ಸ್ಥಳ ಮಂಜೂರಾಗಿದೆ. ಹಲವಾರು ವರ್ಷಗಳಿಂದ ರುದ್ರಭೂಮಿಯಲ್ಲಿ ಅಂತ್ಯಅಂಸ್ಕಾರ ನಡೆಸುತ್ತಾ ಬಂದಿದ್ದೇವೆ. 7ರಿಂದ 8 ಸಮಾಧಿಗಳನ್ನು ಹಿಟಾಚಿ ಯಂತ್ರದ ಮೂಲಕ ಕಿತ್ತು ರಸ್ತೆ ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಮುಖ್ಯಾಧಿಕಾರಿ ಅಮರನಾರಾಯಣ, ಕಂದಾಯ ನಿರೀಕ್ಷಕ ಸಿದ್ದರಾಜು ಭೇಟಿ ನೀಡಿ ಪರಿಶೀಲಿಸಿದರು.

ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯ ಎಂ.ವಿ.ಮಂಜುನಾಥ್ ಆಚಾರ್, ಅನಂತ ಪದ್ಮನಾಭಚಾರ್, ಬೋಜರಾಜು, ಶ್ರೀನಿವಾಸ್ ಆಚಾರ್, ನಂದಚಾರ್, ಶಂಕರ್ ಚಾರ್, ನಾಗಾರಾಜು, ರಾಮಚಾರ್, ಶ್ರೀನಿವಾಸ್, ಸುದರ್ಶನ್, ರವಿಶಂಕರ್, ಶಂಕರಪ್ಪ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು