ತುಮಕೂರು: ಪಾವಗಡ ತಾಲ್ಲೂಕು ವೈ.ಎನ್.ಹೊಸಕೋಟೆ ಗ್ರಾಮದ ಎಂ.ವಿ.ಪ್ರಕಾಶ್ ನೇಯ್ದ ‘ರೈನ್ಬೊ ಕಲಾಂಜಲಿ’ ರೇಷ್ಮೆ ಸೀರೆಗೆ ರಾಜ್ಯ ಸರ್ಕಾರ ರಾಜ್ಯ ಮಟ್ಟದ ಪ್ರಥಮ ಬಹುಮಾನ ಘೋಷಿಸಿದೆ.

ಪ್ರಶಸ್ತಿ ₹25 ಸಾವಿರ ನಗದು, ಸ್ಮರಣಿಕೆ ಮತ್ತು ಪ್ರಮಾಣಪತ್ರ ಒಳಗೊಂಡಿದೆ. ರೇಷ್ಮೆ ಕ್ಷೇತ್ರದಲ್ಲಿ ನೇಕಾರರು ಹೊಂದಿರುವ ನೈಪುಣ್ಯತೆ, ಶ್ರೇಷ್ಠತೆ, ತಾಂತ್ರಿಕತೆ ಹಾಗೂ ಉತ್ಕೃಷ್ಟತೆ ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ.

ಪ್ರಕಾಶ್ ನೇಯ್ದ ರೇಷ್ಮೆ ಸೀರೆ 6.30 ಮೀಟರ್ ಉದ್ದ, 49 ಇಂಚು ಅಗಲವಿದ್ದು, ಸುಮಾರು 850 ಗ್ರಾಂ ತೂಕವಿದೆ. ಈ ಸೀರೆಯ ಮೌಲ್ಯ ₹85 ಸಾವಿರ.

ಆ. 7ರಂದು ಬೆಂಗಳೂರಿನ ಕಬ್ಬನ್ ಉದ್ಯಾನ ಬಳಿಯ ಸರ್ಕಾರಿ ನೌಕರರ ಭವನದಲ್ಲಿ ನಡೆಯುವ 11ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.