ಏಪ್ರಿಲ್ 1ರಂದು ರಾತ್ರಿ 9 ಗಂಟೆಗೆ ಕಲ್ಲುಗಾಲಿ ರಥೋತ್ಸವ ನಡೆಯಲಿದೆ. ಏಪ್ರಿಲ್ 2ರಂದು ರಾತ್ರಿ 9 ಗಂಟೆಗೆ ಗಜಪತಿ ಮೇಲೆ ಸ್ವಾಮಿ ಉತ್ಸವ, ಮಾರ್ಚ್ 3ರಂದು ರಾತ್ರಿ 10 ಗಂಟೆಗೆ ಹನುಮಂತನ ಮೇಲೆ ಸ್ವಾಮಿಯ ಉತ್ಸವ (ಹೂವಿನ ರಥೋತ್ಸವ) ಅದ್ದೂರಿಯಾಗಿ ನೆರವೇರಲಿದೆ. ಅಂದು ಬರುವ ಭಕ್ತರಿಗೆ ಬೆಳಿಗ್ಗೆ ಉಪಾಹಾರದ ವ್ಯವಸ್ಥೆ, ರಾತ್ರಿ ಹರಿಸೇವೆ (ಅನ್ನ ಸಂತರ್ಪಣೆ) ನಡೆಯಲಿದೆ. ಮಧ್ಯಾಹ್ನ 2ಕ್ಕೆ ಉಂಡೆ ಮಂಡೆ ಸೇವೆ ಇದೆ.