ಕಚೇರಿ ಮುಂದೆ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಜಮೀನು ಮಾಲೀಕರಾದ ಭೈರಪ್ಪ, ಸುರೇಶ್, ಈ ಭಾಗದಲ್ಲಿ ಹಳಿಗಳ ನಿರ್ಮಾಣಕ್ಕೆ ರೈತರು ಜಮೀನು ನೀಡಿದ್ದಾರೆ. ಆದರೆ ರೈಲ್ವೆ ಮಾರ್ಗದ ಇಕ್ಕೆಲಗಳಲ್ಲಿರುವ ಮನೆಗಳಿಗೆ, ರೈತರ ಜಮೀನುಗಳಿಗೆ ಹೋಗಲು ಸೇವಾ ರಸ್ತೆ ನಿರ್ಮಾಣವಾಗಿಲ್ಲ. ರೈಲ್ವೆ ಇಲಾಖೆಯವರು ತಮ್ಮ ಅನುಕೂಲಕ್ಕಾಗಿ ರಸ್ತೆ ನಿರ್ಮಾಣ ಮಾಡಿದ್ದಾರೆಯೇ ಹೊರತು ರೈತರ, ನಾಗರಿಕರ ಅನುಕೂಲಕ್ಕೆ ಅಲ್ಲ. ರೈತರು ಪರ್ಯಾಯವಾಗಿ ನಿರ್ಮಿಸಿಕೊಂಡಿರುವ ರಸ್ತೆಗಳಿಗೆ ತಡೆಗೋಡೆ ನಿರ್ಮಿಸಿ ಅನಾನುಕೂಲ ಮಾಡುತ್ತಿದ್ದಾರೆ ಎಂದು ದೂರಿದರು.