ಮೇ 1ರಂದು ಹಿಂದೂ ಸಾದರ ವಧು ವರರ ಸಮಾವೇಶ

ಶುಕ್ರವಾರ, ಮೇ 24, 2019
29 °C

ಮೇ 1ರಂದು ಹಿಂದೂ ಸಾದರ ವಧು ವರರ ಸಮಾವೇಶ

Published:
Updated:

ತುಮಕೂರು: ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದಿಂದ ಮೇ 1 ರಂದು ಬುಧವಾರ ಬೆಳಿಗ್ಗೆ 11ಕ್ಕೆ ಬೆಂಗಳೂರಿನ ಕೇಂದ್ರ ಸಂಘದ ಆವರಣದಲ್ಲಿ ಹಿಂದೂ ಸಾದರ ವಧು-ವರರ ಅನ್ವೇಷಣಾ ಸಮಾವೇಶ ಆಯೋಜಿಸಲಾಗಿದೆ.

ಆಸಕ್ತರು ನಗರದಲ್ಲಿನ ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ₹ 500 ನೀಡಿ ಅರ್ಜಿಗಳನ್ನು ಪಡೆಯಬೇಕು. ಪಾಸ್ ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ವಧು ಅಥವಾ ವರನ ವಿವರಗಳನ್ನು ಭರ್ತಿ ಮಾಡಿ ಏ.25 ರ ಒಳಗಾಗಿ ಕೇಂದ್ರ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು.

ಸಮಾವೇಶದ ದಿನದಂದು ವಧು-ವರ ಹಾಗೂ ಅವರ ತಂದೆ, ತಾಯಿ, ಪೋಷಕರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೇಂದ್ರ ಸಮಿತಿಯ‌ ಅಧ್ಯಕ್ಷ ಡಿ.ಇ.ರವಿಕುಮಾರ್ 9900959516 ಹಾಗೂ ನಗರ ಘಟಕ ಅಧ್ಯಕ್ಷ ಎಸ್.ಟಿ.ಡಿ ನಾಗರಾಜ್ 9844296408 ಸಂಪರ್ಕಿಸಲು ಕೋರಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !