ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುರುವೇಕೆರೆ: ಅಂಗವಿಕಲರಿಗೆ ಸ್ಕೂಟರ್ ವಿತರಣೆ

Published 1 ಜುಲೈ 2024, 14:27 IST
Last Updated 1 ಜುಲೈ 2024, 14:27 IST
ಅಕ್ಷರ ಗಾತ್ರ

ತುರುವೇಕೆರೆ: ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ 2022-23ನೇ ಸಾಲಿನ ಶೇ 5ರ ಯೋಜನೆಯ ಅನಿರ್ಬಂಧಿತ ಅನುದಾನದಲ್ಲಿ ₹20 ಲಕ್ಷ ವೆಚ್ಚದ ಸ್ಕೂಟರ್‌ಗಳನ್ನು ಶಾಸಕ ಎಂ.ಟಿ.ಕೃಷ್ಣಪ್ಪ 17 ಅಂಗವಿಕಲ ಫಲಾನುಭವಿಗಳಿಗೆ ವಿತರಿಸಿದರು.

ಈಗಾಗಲೇ 70ಕ್ಕೂ ಹೆಚ್ಚು ಅಂಗವಿಕಲರಿಗೆ ಸ್ಕೂಟರ್ ನೀಡಲಾಗಿದೆ. ಇನ್ನು ಉಳಿದಿರುವ 80 ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದರು.

ಫಲಾನುಭವಿಗಳಿಗೆ ವಿತರಿಸಿದ ಸ್ಕೂಟರ್‌ಗಳಲ್ಲಿ ಕೆಲವು ಸೀಟು ಹರಿದಿರುವ, ಎಂಜಿನ್ ಹಳೆಯದಾಗಿ ತುಕ್ಕು ಹಿಡಿದಿರುವ ಸ್ಕೂಟರ್ ನೀಡಲಾಗಿತ್ತು. ಫಲಾನುಭವಿಗಳು ಹೊಸ ಸ್ಕೂಟರ್ ಬೇಕು ಹಳೆಯ ಸ್ಕೂಟರ್ ಬೇಡ ಎಂದು ಪಟ್ಟು ಹಿಡಿದರು.

ಇಒ ಶಿವರಾಜಯ್ಯ, ಮುಖಂಡ ತ್ಯಾಗರಾಜು, ಸಿದ್ದಗಂಗಯ್ಯ, ಮಧು, ರಾಜಕುಮಾರ್, ನಟೇಶ್, ವೀಣಾ, ಲತಾ, ಮಂಗಳಗೌರಮ್ಮ, ನಾಗಮಣಿ, ನವೀನಾ, ಪರಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT