ತಾಲ್ಲೂಕಿನ ಬಾಣಾವರ ಗೇಟ್ ಬಳಿ ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಬಿದರೆಕಟ್ಟೆ ಗ್ರಾಮದ ರತ್ನಮ್ಮ (45) ಸಾವನ್ನಪ್ಪಿದ್ದು, ಇವರ ಪತಿ ಗಂಗರಾಮಯ್ಯ (56) ಗಂಭೀರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ತುಮಕೂರು ಕಡೆಯಿಂದ ಬಿದರೆಕಟ್ಟೆಗೆ ಹೋಗುವಾಗ ತುಮಕೂರಿನಿಂದ ಕುಣಿಗಲ್‌ಗೆ ತೆರಳುತ್ತಿದ್ದ ಬಸ್ ಡಿಕ್ಕಿಯಾಗಿದೆ. ರತ್ನಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.