ಸೋಮವಾರ, ಅಕ್ಟೋಬರ್ 26, 2020
24 °C

ಶಿರಾ: ಬಿಜೆಪಿಯಿಂದ ಕುಂಚಿಟಿಗರಿಗೆ ಟಿಕೆಟ್‌ ಬೇಡ- ಬಿಜೆಪಿ ಮುಖಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ಬಿಜೆಪಿಯಿಂದ ಶಿರಾ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಕುಂಚಿಟಿಗರನ್ನು ಹೊರತು ಪಡಿಸಿ ಅಹಿಂದಾ ವರ್ಗದವರಿಗೆ ಟಿಕೆಟ್‌ ನೀಡಬೇಕು ಎಂದು ಬಿಜೆಪಿ ಮುಖಂಡ ಸಿ.ಎಂ. ನಾಗರಾಜು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಶಿರಾ ವಿಧಾನಸಭೆ ಕ್ಷೇತ್ರದಲ್ಲಿ ಕುಂಚಿಟಿಗರಿಗಿಂತ ಅಹಿಂದಾ ವರ್ಗದವರೇ ಹೆಚ್ಚಾಗಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಕುಂಚಿಟಿಗ ಸಮುದಾಯದವರಿಗೆ ಟಿಕೆಟ್‌ ನೀಡುವ ಮೂಲಕ ಅಹಿಂದಾ ವರ್ಗದವರಿಗೆ ಅನ್ಯಾಯ ಮಾಡುತ್ತಿದೆ. ಬಿಜೆಪಿ ಇಂತಹ ತಪ್ಪು ಮಾಡಬಾರದು’ ಎಂದರು.

ಹಿರಿಯೂರು ಕ್ಷೇತ್ರದ ಶಾಸಕ ಪೂರ್ಣಿಮಾ ಅವರ ಗಂಡ ಡಿ.ಟಿ.ಶ್ರೀನಿವಾಸ್ ಬಿಜೆಪಿಯಿಂದ ಸ್ಪರ್ಧಿಸಲು ಲಾಭಿ ಮಾಡುತ್ತಿದ್ದಾರೆ. ಇವರಿಗೆ ಟಿಕೆಟ್ ನೀಡಿದರೆ ಅಹಿಂದ ವರ್ಗದವರು ಯಾರೂ ಇವರಿಗೆ ಬೆಂಬಲ ನೀಡುವುದಿಲ್ಲ. ಅವರನ್ನು ಸೋಲಿಸುವುದೇ ನಮ್ಮ ಅಜೆಂಡಾವಾಗುತ್ತದೆ ಎಂದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು