ಶಿವಕುಮಾರ ಶ್ರೀ ಬರೆದಿಟ್ಟಿರುವಂತೆ ಅವರ ಕ್ರಿಯಾಸಮಾಧಿ ನಡೆಯಲಿದೆ: ಸಿದ್ಧಲಿಂಗ ಶ್ರೀ

7

ಶಿವಕುಮಾರ ಶ್ರೀ ಬರೆದಿಟ್ಟಿರುವಂತೆ ಅವರ ಕ್ರಿಯಾಸಮಾಧಿ ನಡೆಯಲಿದೆ: ಸಿದ್ಧಲಿಂಗ ಶ್ರೀ

Published:
Updated:

ತುಮಕೂರು: ಹಿರಿಯ ಶ್ರೀಗಳಾದ ಶಿವಕುಮಾರ ಸ್ವಾಮೀಜಿ ಅವರು ಬರೆದಿಟ್ಟಿರುವಂತೆ ಅವರ ಅಪೇಕ್ಷೆಯಂತೆ ಅಂತಿಮ ಕ್ರಿಯಾಸಮಾಧಿಯನ್ನು ನೆರವೇರಿಸಲಾಗುವುದು ಎಂದು ಸಿದ್ಧಗಂಗಾ ಶ್ರೀಮಠದ ಕಿರಿಯ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

ಮಂಗಳವಾರ ಬೆಳಿಗ್ಗೆ, ಮಠದ ಆವರಣದಲ್ಲಿನ ವ್ಯವಸ್ಥೆ, ಪ್ರಸಾದ, ಕ್ರಿಯಾಸಮಾಧಿ ವಿಧಿವಿಧಾನಗಳ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

* ಇದನ್ನೂ ಓದಿ: 37 ವರ್ಷಗಳ ಹಿಂದೆ ನಿಗದಿಯಾದ ಜಾಗದಲ್ಲಿ ಕ್ರಿಯಾ ಸಮಾಧಿ

ನಿನ್ನೆ ಮತ್ತು ಇಂದು ಭಕ್ತರು ಹಿರಿಯ ಶ್ರೀಗಳಾದ ಶಿವಕುಮಾರ ಸ್ವಾಮೀಜಿ ಅವರ ದರ್ಶನ ಪಡೆಯುತ್ತಿದ್ದಾರೆ. ಮಧ್ಯಾಹ್ನ 3ರವರೆಗೆ ದರ್ಶನಕ್ಕೆ ಅವಕಾಶವಿದೆ. ಬಳಿಕ 4ರಿಂದ ಕ್ರಿಯಾಸಮಾಧಿಯ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ. 5 ಗಂಟೆಯ ಬಳಿಕ ಅಂತಿಮ ಕ್ರಿಯಾಸಮಾಧಿ ನಡೆಯಲಿದೆ ಎಂದು ಶ್ರೀಗಳು ತಿಳಿಸಿದರು. 

ತಮ್ಮ ಅಂತಿಮ ಕ್ರಿಯಾವಿಧಾನಗಳು ಹೇಗೆ ನಡೆಯಬೇಕು ಎಂದು ಶ್ರೀಗಳು ಬರೆದಿಟ್ಟಿದ್ದಾರೆ. ಶ್ರೀಗಳ ಅಪೇಕ್ಷೆಯಂತೆಯೇ ನೆರವೇರಿಸಲಾಗುವುದು. ಶ್ರೀಗಳು ಬರೆದಿಟ್ಟಿರುವುದನ್ನು ತೆಗೆದು ನೋಡಿ ಅದರಂತೆ ಮಾಡುತ್ತೇವೆ. ಶ್ರೀಗಳು ತಮ್ಮ ಹಿರಿಯ ಗುರುಗಳಾದ ಉದ್ಧಾನ ಶಿವಯೋಗಿಗಳಿಗೆ ಕ್ರಿಯಾಸಮಾಧಿ ನೆರವೇರಿಸಿದಂತೆಯೇ ಶಿವಕುಮಾರ ಶ್ರೀಗಳಿಗೂ ನೆರವೇರಿಸುತ್ತೇವೆ ಎಂದು ತಿಳಿಸಿದರು.

 

* ಇವನ್ನೂ ಓದಿ: 

ಅನಂತದೆಡೆಗೆ ನಡೆದ ’ದೇವರು’

ಅರಿವಿನ ಜತೆ ಬದುಕು ಕೊಟ್ಟ ಲೋಕಗುರು​

* ಸರಳತೆಯ ಕಾಯಕಯೋಗಿ

ಬುದ್ಧಿ’ಯನ್ನು ಕಾಣಲು ಓಡೋಡಿ ಬಂದರು​

ಅನ್ನದಾಸೋಹದಲ್ಲಿಯೇ ಶಿವನ ಸಾಕ್ಷಾತ್ಕಾರ​

ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ: ನೀವು ಓದಬೇಕಾದ 14 ಸುದ್ದಿಗಳು

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !